ಭಗವದ್ಗೀತಾ ಜ್ಞಾನ ಪ್ರಸರಣ ಅಭಿಯಾನ ಉದ್ಘಾಟನೆ

ಬೈಂದೂರು: ಇಂದು ಮನುಷ್ಯನ ಆಸೆ, ಆಕಾಂಕ್ಷೆಗಳಿಗೆ ಮಿತಿಯಿಲ್ಲ. ಅದಕ್ಕಾಗಿ ಶ್ರಮಿಸುವ, ತಪಗೈಯಲು ಯಾರಿಗೂ ಸಮಯವಿಲ್ಲ. ಖಿನ್ನಗಿದ್ದವರಿಗೆ ಸಲಹೆ ನೀಡಿದರೆ ಸಿದ್ಧ ಸೂತ್ರಗಳನ್ನು ಅಪೇಕ್ಷಿಸುತ್ತಾರೆ ಎಂದು ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶಂಕರಕಲಾ ಮಂದಿರದಲ್ಲಿ ಗುರುವಾರ ಜರುಗಿದ ಶ್ರೀ ಭಗವದ್ಗೀತಾ ಜ್ಞಾನ ಅಭಿಯಾನ ಉದ್ಘಾಟಿಸಿ ಮಾತನಾಡಿದರು. 

ಇಲ್ಲಿನ ಸೀತಾರಾಮಚಂದ್ರ ದೇವಸ್ಥಾನ ಕೇಂದ್ರಿತ ಶ್ರೀ ಭಗವದ್ಗೀತಾ ಜಯಂತಿ ಆಚರಣ ಮತ್ತು ಪಠಣ ಅಭಿಯಾನದ ಅಧ್ಯಕ್ಷ ಬಿ. ರಾಮಕೃಷ್ಣ ಸೇರುಗಾರ ಅಧ್ಯಕ್ಷತೆ ವಹಿಸಿ, ತಾಲೂಕಿನಾದ್ಯಂತ ನೂರಕ್ಕೂ ಮಿಕ್ಕಿದ ಕೇಂದ್ರಗಳಲ್ಲಿ ನಾನಾ ಸಂಘ ಸಂಸ್ಥೆಗಳ ಸಹಕಾರದಿಂದ ಉಚಿತ ಪುಸ್ತಕ, ಪಠಣಕ್ಕೆ ಮಾರ್ಗದರ್ಶನ ನೀಡುವ ಅಭಿಯಾನದ ಮಾಹಿತಿ ನೀಡಿದರು. ಅಲ್ಲದೇ ಡಿ. 15ರಂದು ಇಲ್ಲಿನ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಏರ್ಪಡಿಸಲಾದ ಪಠಣ, ಕ್ವಿಜ್ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು. 

ಸೀತಾರಾಮ ದೇವಸ್ಥಾನದ ಹನುಮಂತ ಬೆಳ್ಕಿ, ಹವ್ಯಕ ಮಹಾಸಭಾದ ನಾಗರಾಜ ಭಟ್, ಉಪ್ಪುಂದ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ವಿಷ್ಣು ಪಡಿಯಾರ ಉಪಸ್ಥಿತರಿದ್ದರು. ಈ ಸಂದರ್ಭ ಸಾಹಿತಿ ವರಮಹಾಲಕ್ಷ್ಮೀ ಹೊಳ್ಳ ನೇತೃತ್ವದಲ್ಲಿ ಉಪ್ಪುಂದದ ವಿಪ್ರ ರಂಜಿನಿ ಮಹಿಳಾ ತಂಡದವರಿಂದ ಭಗವದ್ಗೀತೆಯ 12 ಮತ್ತು 13ನೇ ಅಧ್ಯಾಯಗಳ ಪಠಣ ನಡೆಯಿತು. ಆಶಾ ಕಿಶೋರ್ ಪ್ರಾರ್ಥಿಸಿದರು, ಕೇಶವ ನಾಯ್ಕ ಸ್ವಾಗತಿಸಿ, ಯು. ಗಣೇಶ ಪ್ರಸನ್ನ ಮಯ್ಯ ನಿರೂಪಿಸಿ, ಸಂದೇಶ ಭಟ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com