ನಾಗೂರಿನಲ್ಲಿ ತಾಳಮದ್ದಲೆ ಸಪ್ತಾಹ

ನಾಗೂರು: ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಸಹಯೋಗದೊಂದಿಗೆ ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನ. 15ರಿಂದ 21ರ ತನಕ ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹ ನಡೆಯಲಿದೆ. ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ದಿ. ತೆಕ್ಕಟ್ಟೆ ಆನಂದ ಮಾಸ್ಟರ್ ಸ್ಮರಣ ವೇದಿಕೆಯಲ್ಲಿ ಪ್ರತಿದಿನ ಸಂಜೆ 5ರಿಂದ 8ರ ವರೆಗೆ ಇದು ನಡೆಯುವುದು. 
   ಮೊದಲ ದಿನ ಕೆ. ಉಮೇಶ ಶ್ಯಾನುಭಾಗ್ ಅಧ್ಯಕ್ಷತೆಯಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಸಪ್ತಾಹವನ್ನು ಉದ್ಘಾಟಿಸುವರು. ನ. 17ರಂದು ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ತೆಕ್ಕಟ್ಟೆ ಆನಂದ ಮಾಸ್ಟರ್ ಅವರ ಪತ್ನಿ ಸುನಂದಾ ಶೆಣೈ ಮತ್ತು ಡಾ. ಎಂ. ಪ್ರಭಾಕರ ಜೋಷಿ ಅವರನ್ನು ಸನ್ಮಾನಿಸಲಾಗುವುದು. ನ. 21ರಂದು ದ.ಕ. ಕ.ಸಾ.ಪ. ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯುವುದು.
   ಸಪ್ತಾಹದ ಮೊದಲ ದಿನವಾದ ಶುಕ್ರವಾರ ಕೃಷ್ಣ ಸಂಧಾನ, ಶನಿವಾರ ರಾವಣ ವಧೆ, ರವಿವಾರ ವಾಲಿ ಮೋಕ್ಷ, ಸೋಮವಾರ ಕರ್ಣಪರ್ವ, ಮಂಗಳವಾರ ಅಂಗದ ಸಂಧಾನ, ಬುಧವಾರ ಭೀಷ್ಮಾಭಿದಾನ ಮತ್ತು ಕೊನೆಯ ದಿನವಾದ ಗುರುವಾರ ಸುಧನ್ವ ಮೋಕ್ಷ ಪ್ರಸಂಗಗಳ  ತಾಳಮದ್ದಲೆ ನಡೆಯಲಿವೆ. ವಿವಿಧ ದಿನಗಳ ತಾಳಮದ್ದಲೆಯ ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಮಯ್ಯ, ಶಂಕರ ಭಟ್ ಬ್ರಹ್ಮೂರು, ಸುರೇಶ ಶೆಟ್ಟಿ, ಕೊಳಗಿ ಕೇಶವ ಹೆಗಡೆ, ಗೊಪಾಲ ಗಾಣಿಗ ಹೇರಂಜಾಲು, ಶಂಕರ ಭಾಗವತ, ಶಿವಾನಂದ ಕೋಟ, ಸುನಿಲ್ ಭಂಡಾರಿ ಕಡತೋಕ, ರಾಮಕೃಷ್ಣ ಮಂದರ್ತಿ, ಪರಮೇಶ್ವರ ಭಂಡಾರಿ ಕರ್ಕಿ, ರಾಮದಾಸ ಮರವಂತೆ ಮತ್ತು ಅರ್ಥದಾರಿಗಳಾಗಿ ಡಾ. ಪ್ರಭಾಕರ ಜೋಷಿ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಗಣಪತಿ ಭಟ್ ಸಂಕದಗುಂಡಿ, ಮೋಹನದಾಸ ಶೆಣೈ ಆರ್ಗೋಡು, ಉಮಾಕಾಂತ ಭಟ್ ಮೇಲುಕೋಟೆ, ಅಶೋಕ ಭಟ್ ಉಜಿರೆ, ವಿಶ್ವನಾಥ ಶೆಟ್ಟಿ ಸಿದ್ಧಕಟ್ಟೆ, ಜಬ್ಬಾರ್ ಸಮೊ, ವೈಕುಂಠ ಹೇರ್ಳೆ ಸಾಲಿಗ್ರಾಮ, ರಾಮಚಂದ್ರ ನಿಸ್ರಾಣಿ ಸಾಗರ, ವಿಶ್ವೇಶ್ವರ ಭಟ್ ಸುಣ್ಣಂಬಳ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗ ಭಟ್, ಸುಜಯೀಂದ್ರ ಹಂದೆ ಕೋಟ, ಸದಾನಂದ ಇಡುವಾಣಿ ಭಾಗವಹಿಸುವರು ಎಂದು ಸಂಘಟಕರು ಪ್ರಕಟಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com