ಡಿ.1ಕ್ಕೆ ಉಡುಪಿ ಉತ್ಸವ

ಉಡುಪಿ: ನಗರಸಭೆ, ಬೆಂಗಳೂರಿನ ನ್ಯಾಷನಲ್‌ ಕನ್ಸೂಮರ್‌ ಫೇರ್‌ ಜಂಟಿ ಆಶ್ರಯದಲ್ಲಿ ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆದು ಬರುತ್ತಿರುವ ಉಡುಪಿ ಉತ್ಸವಕ್ಕೆ ಈ ಬಾರಿಯೂ ಕಲ್ಸಂಕದ ರಾಯಲ್‌ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು ಉತ್ಸವವು ಡಿ. 1ರಂದು ಉದ್ಘಾಟನೆಗೊಳ್ಳಲಿದೆ.

ನ್ಯಾಷನಲ್‌ ಕನ್ಸೂéಮರ್‌ ಫೇರ್‌ (ಎನ್‌ಸಿಎಫ್) ಸಂಸ್ಥೆಯು ಕೆಲವು ದಿನಗಳಿಂದ ಇಲ್ಲಿ ಬೀಡು ಬಿಟ್ಟಿದು ಸುಮಾರು 100 ಕಾರ್ಮಿಕರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಸುಮಾರು 150 ವ್ಯಾಪಾರ ಮಳಿಗೆಗಳು ಇಲ್ಲಿ ತೆರೆಯಲ್ಪಡುತ್ತವೆ.

ಏನುಂಟು ಏನಿಲ್ಲಾ?

ಆಟೋ ಮೊಬೈಲ್‌, ಹೋಮ್‌ ಅಪ್ಲೆ„ಯೆನಸ್‌, ಫ‌ನೀಚರ್‌, ಹೆಲ್ತ್‌ಕೇರ್‌, ಫ್ಯಾಶನ್‌ ವೇರ್ , ಬ್ಯೂಟಿ ಪ್ರಾಡೆಕ್ಟ್, ಫಿಟ್‌ನೆಸ್‌, ಗಾರ್ಮೆಂಟ್ಸ್‌, ಇಲೆಕ್ಟ್ರಾನಿಕ್ಸ್‌, ಚಿಮಿಣಿ ಆಯಂಡ ಹಾಬ್ಸ್, ಆ್ಯಂಟಿಕ್‌ ಫಿಟ್ಟಿಂಗ್ಸ್‌, ಕಾಪೆìಟ್‌, ವಾಲ್‌ ಹ್ಯಾಂಗಲ್ಸ್‌, ಕ್ಲಾಕ್‌, ಲೈಟಿಂಗ್‌, ಬ್ರಾಸ್‌ ಐಡೋಲ್ಸ್‌, ಫ‌ೂಟ್‌ವೇರ್‌, ಕನ್ಸೂéಮರ್‌ ಕೇರ್‌, ಆರ್ಟಿಫೀಶಿಯಲ್‌ ಆ್ಯಂಡ್‌ ಫ್ಯಾನ್ಸಿ ಜ್ಯುವೆಲ್ಲರಿಸ್‌, ಹ್ಯಾಂಡ್‌ಲೂಮ್‌, ಹ್ಯಾಂಡಿಕ್ರಾಫ್ಟ್, ಸ್ಟೇಷನರಿ, ಕ್ರೋಕರಿ, ಮೊದಲಾದವು ಪ್ರಮುಖವಾಗಿದ್ದು, ಹತ್ತು ಹಲವು ಗೃಹೋಪಯೋಗಿ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿರುವುದು ಇಲ್ಲಿನ ವಿಶೇಷತೆಯಾಗಿದೆ.

25 ಬಗೆಯ ಮನೋರಂಜನಾ ಸಾಧನಗಳು

ಈ ಬಾರಿ ಸುಮಾರು 25 ಬಗೆಯ ಮನೋರಂಜನಾ ಸಾಧನಗಳು ಬರಲಿದ್ದು ಅವುಗಳೆಂದರೆ ವಾಟರ್‌ ಪಾರ್ಕ್‌, ಬೋಟಿಂಗ್‌, ಟೊರಾಟೊರಾ, ಡ್ರ್ಯಾಗನ್‌ ಕಾರ್‌, ತ್ರೀಡಿ ಸಿನಿಮಾ, ಜಾಯಿಂಟ್‌ ವೀಲ್‌, ಡ್ರ್ಯಾಗನ್‌ ವೀಲ್‌, ಬ್ರೇಕ್‌ ಡಾನ್ಸ್‌, ಎಲೆಕ್ಟ್ರಿಕ್‌ ಟ್ರೈನ್‌, ಚೈನಾ ಬೆಲೂನ್‌, ಕಪ್ಪೆ ಸವಾರಿ, ಟೈಟಾನಿಕ್‌ ಜಿಗ್‌ಜಾಗ್‌, 150 ಮೀಟರ್‌ ಲೆಂಥ್‌ ಬಲೋನ್‌, ಡ್ರ್ಯಾಗನ್‌ ಬಲೂನ್‌ ಪ್ರಮುಖವಾದವು.

ಡಸ್ಟ್‌ ಫ್ರೀ ಫ‌ುಡ್‌ ಕೋರ್ಟ್‌

ಉತ್ಸವದಲ್ಲಿ ಪಾಲ್ಗೊಳ್ಳವವರಿಗಾಗಿ ವಿವಿಧ ಶೈಲಿಯ ಆಹಾರೋತ್ಪನ್ನಗಳ ಫ‌ುಡ್‌ಕೋರ್ಟ್‌ ಇಲ್ಲಿರುತ್ತದೆ. ಚೈನೀಸ್‌, ಚಾಟ್ಸ್‌, ನಾರ್ತ್‌ ಇಂಡಿಯನ್‌, ಸೌತ್‌ ಇಂಡಿಯನ್‌, ಮಂಗೋಲಿಯನ್‌, ಕಾಂಟಿನೆಂಟಲ್‌ ಡಿಶ್‌ಗಳು, ಕರಾವಳಿ ಫಿಶ್‌ ಫ್ರೈ, ಚರ್‌ಮುರಿ, ಬಿಸಿಬಿಸಿ ಬನಾನ ಬಜಿ, ಬಿಸಿಬಿಸಿ ಜೋಳಪುರಿ, ಫ‌ುಟ್‌ ಜ್ಯೂಸ್‌, ಐಸ್‌ಕ್ರೀಮ್‌ನ್ನು ಒಳಗೊಂಡ ಡಸ್ಟ್‌ ಫ್ರೀ ಫ‌ುಡ್‌ಕೋರ್ಟ್‌ ಇಲ್ಲಿನ ವಿಶೇಷತೆಯಾಗಿದೆ.

ಸಾಂಸ್ಕೃತಿಕ ವಿಶೇಷ

ಉಭ ಜಿಲ್ಲೆಗಳ ಪ್ರತಿಭೆಗಳ ಆನಾವರಣಕ್ಕೆ ಉತ್ಸವದ ಸಾಂಸ್ಕೃತಿಕ ವೇದಿಕೆ ಸಜ್ಜುಗೊಳ್ಳುತ್ತಿದೆ. ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳು ಇಲ್ಲಿ ಆರಳಲಿವೆ. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಜಿಲ್ಲೆಯ ಸಾಂಸ್ಕೃತಿಕ ಸೊಬಗನ್ನು ಉಣಬಡಿಸುವ ಉದ್ದೇಶದಿಂದ ಉತ್ಸವವನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಯುವರಾಜ್‌ ಪಿ., ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ್‌ ರಾವ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ವಿಶೇಷ

ಉತ್ಸವದಲ್ಲಿ ಕಳೆದ ಮೂರು ವರ್ಷ ಕಂಡು ಬಾರದ ದೇಶ- ವಿದೇಶದ ಸುಮಾರು 90 ವೈವಿಧ್ಯಮಯ ಮೀನುಗಳುಳ್ಳ ಫಿಶ್‌ ಅಕ್ವೇರಿಯಂ ಪ್ರದರ್ಶನವನ್ನು ಗ್ರಾಹಕರು ವೀಕ್ಷಿಸಬಹುದು. ಇದಲ್ಲದೆ ಬಡ್ಸ್‌ ಶೋ, ಕೇಕ್‌ ಶೋ ಈ ಬಾರಿಯ ವಿಶೇಷತೆಯಾಗಿದೆ.
Udayavani | Nov 25, 2013

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com