ಕೊಲ್ಲೂರು ಸಮಗ್ರ ಒಳಚರಂಡಿ ಕಾಮಗಾರಿಗೆ ಶೀಘ್ರ ಚಾಲನೆ

ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಳದ ಪರಿಸರದಲ್ಲಿ ಸಮಗ್ರ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಶೀಘ್ರ ಚಾಲನೆ ಒದಗಿಸುವಂತೆ ಸಂಬಂತ ಅಕಾರಿಗಳಿಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ನಿರ್ದೇಶನ ನೀಡಿದರು. 

ದೇವಳದ ಆಡಳಿತ ಕಚೇರಿಯಲ್ಲಿ ಶನಿವಾರ ಜರುಗಿದ ದೇವಳದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 31 ಕೋಟಿ ರೂ. ಮೊತ್ತದ ಈ ಯೋಜನೆಗೆ ಆರಂಭಿಕ ಅನುದಾನವಾಗಿ ದೇವಳದ ವತಿಯಿಂದ 6 ಕೋಟಿ ನೀಡಲಾಗುವುದು. ಈಗಾಗಲೆ ಜಾಗ ಗುರುತಿಸುವಿಕೆ ಕಾರ್ಯ ನಡೆಸಲಾಗಿದೆ. ಭೂ ಸ್ವಾೀನ ಪ್ರಕ್ರಿಯೆ ಆರಂಭಿಸಿ ಗ್ರಾಮೀಣ ಅಭಿವೃದ್ಧಿ ನಿಗಮದ ಮೂಲಕ ತಕ್ಷಣ ಕಾಮಗಾರಿ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಕಾರಿಗಳಿಗೆ ತಿಳಿಸಿದರು. 

ಕೊಲ್ಲೂರು ಶಾಲೆಗೆ ಸರಕಾರಿ ಸೌಲಭ್ಯ: ದೇವಳದ ವತಿಯಿಂದ ನಡೆಯುತ್ತಿರುವ ಶಾಲೆಗಳಿಗೆ ಸರಕಾರಿ ಸವಲತ್ತು ಸಿಗದಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. 1997ರ ಮೊದಲು ಅನುದಾನಿತ ಕೋಟಾದಡಿ ಸೌಲಭ್ಯ ಪಡೆಯುತ್ತಿದ್ದ ಶಾಲೆಗಳು ಈಗ ಆ ಸೌಲಭ್ಯದಿಂದ ವಂಚಿತವಾಗಿವೆ. ಮಕ್ಕಳು ಬಿಸಿಯೂಟ, ಸಮವಸ್ತ್ರ, ಸೈಕಲ್, ಕ್ಷೀರಭಾಗ್ಯದಂತಹ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಸಹ ಸೌಲಭ್ಯ ವಂಚಿತರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಬಿಇಓ ಸರಕಾರಕ್ಕೆ ವರದಿ ಸಲ್ಲಿಸಿ ಮೊದಲಿನಂತೆ ಕೊಲ್ಲೂರು ದೇವಳದ ಶಾಲೆಗಳು ಅನುದಾನಿತ ಶಾಲೆಯ ಖೋಟಾದಡಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಸಂಬಂತ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಶಾಸಕರು ಭರವಸೆ ನೀಡಿದರು. 

ಸರಕಾರಿ ಬಸ್ ಓಡಿಸಲು ಒತ್ತಾಯ: ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಮಾತನಾಡಿ, ಕೊಲ್ಲೂರು ದೇವಳ ಸಿಬ್ಬಂದಿ, ದೇವಳ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಕೊಲ್ಲೂರಿಗೆ ಬರುವ ನಾಗರಿಕರು ಖಾಸಗಿ ಬಸ್‌ಗಳ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಅಸಮರ್ಪಕ ಬಸ್ ಸೇವೆಯಿಂದ ತೊಂದರೆ ಹೆಚ್ಚುತ್ತಿದೆ. ಕೊಲ್ಲೂರಿಗೆ ಬೆಳಗ್ಗೆ ಮತ್ತು ಸಂಜೆ ನಿಯಮಿತವಾಗಿ ಸರಕಾರಿ ಬಸ್ ಓಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 

ಇ-ಸೇವೆ ವಿಸ್ತರಣೆಗೆ ಸೂಚನೆ: ಶಬರಿಮಲೆ ದೇವಳಕ್ಕೆ ಹೋಲಿಸಿದ್ದಲ್ಲಿ ಇ-ಸೇವೆ ಸೌಲಭ್ಯ ಪಡೆಯುವಲ್ಲಿ ಕೊಲ್ಲೂರು ದೇವಳ ತೀರಾ ಹಿಂದುಳಿದಿದೆ. ಈ ಬಗ್ಗೆ ದೇವಳದ ಸಿಬ್ಬಂದಿ ಗಮನಹರಿಸಬೇಕು. ಬ್ಯಾಂಕಿಂಗ್ ಸೇವೆಯನ್ನು ಇನ್ನಿತರ ಬ್ಯಾಂಕ್‌ಗಳಿಗೂ ವಿಸ್ತರಿಸುವ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾಕಾರಿ ಡಾ. ಎಂ.ಟಿ. ರೇಜು ಸಲಹೆ ನೀಡಿದರು. 

ದೇವಳದ ಭೂಮಿ ಗುರುತಿಸುವಿಕೆ: ಕೊಲ್ಲೂರು ದೇವಳಕ್ಕೆ ಸಂಬಂಸಿದ ಭೂಮಿ ಗುರುತಿಸುವಿಕೆ ಕಾರ್ಯ ಮುಂದಿನ 6 ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ವಿಶೇಷ ತಹಸೀಲ್ದಾರರಿಗೆ ನಿರ್ದೇಶನ ನೀಡಿದರು. 

ಉಡುಪಿ ಜಿಲ್ಲಾಕಾರಿ ಡಾ. ಎಂ.ಟಿ. ರೇಜು, ಅಪರ ಜಿಲ್ಲಾಕಾರಿ ಕುಮಾರ್, ತಾಪಂ ಸದಸ್ಯ ಕೊಲ್ಲೂರು ರಮೇಶ ಗಾಣಿಗ, ಬೈಂದೂರು ವಿಶೇಷ ತಹಸೀಲ್ದಾರ್ ತಿಪ್ಪೇಸ್ವಾಮಿ, ದೇವಳದ ಕಾರ್ಯನಿರ್ವಹಣಾಕಾರಿ ಎಲ್.ಎಸ್. ಮಾರುತಿ, ಸಹಾಯಕ ಕಾರ್ಯನಿರ್ವಹಣಾಕಾರಿ ಕೃಷ್ಣಮೂರ್ತಿ, ದೇವಳದ ಈಕ್ಷಕ ರಾಮಕೃಷ್ಣ ಅಡಿಗ, ಕೊಲ್ಲೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಐತಾಳ್, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಮತ್ತು ಸದಸ್ಯರು ಉಪಸ್ಥಿತರಿದ್ದರು. 

ಚರ್ಚಿಸಲ್ಪಟ್ಟ ಪ್ರಮುಖ ವಿಚಾರಗಳು: ದೇವಳದ ವಾಹನ ಪಾರ್ಕಿಂಗ್, ಭೋಜನಗೃಹ ವಿಸ್ತರಣೆ, ಅಡುಗೆ ಮನೆಯ ಹೊಗೆ ನಿವಾರಣೆ, ಸಿಬ್ಬಂದಿಗಳ ಕಾಯಂಗೊಳಿಸುವಿಕೆ, ಸಿಸಿ ಟಿವಿ ಕ್ಯಾಮೆರಾ ಸೌಲಭ್ಯ ವಿಸ್ತರಣೆ, ನಿರ್ಮಿತಿ ಕೇಂದ್ರದಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡುವುದು, ಗೋಶಾಲೆ ಭೂಮಿ ಅತಿಕ್ರಮಣ ತೆರವು, ಕೊಲ್ಲೂರು ಪ್ರವಾಸಿ ಮಂದಿರ ನವೀಕರಣ, ಕೊಲ್ಲೂರು ಹಳೆ ಪೊಲೀಸ್ ಠಾಣೆ ಕಟ್ಟಡ ತೆರವು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com