ಪರಿಶಿಷ್ಟ ಪಂಗಡ ಪದವೀಧರರಿಗೆ ಕೌಶಲ ತರಬೇತಿ

ಉಡುಪಿ: ವಾರ್ತಾ ಇಲಾಖೆ 2013 - 14ನೇ ಸಾಲಿನ 'ಗಿರಿಜನ ಉಪಯೋಜನೆ' ಅಡಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಪದವೀಧರರಿಂದ ಕೌಶಲ ತರಬೇತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಅರ್ಹತೆ ಸಡಿಲಗೊಳಿಸಲಾಗಿದೆ.

ವೃತ್ತಿ ಕೌಶಲ ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಪತ್ರಿಕೋದ್ಯಮ/ ಸಮೂಹ ಸಂವಹನ/ವಿದ್ಯುನ್ಮಾನ ಮಾಧ್ಯಮ ವಿಷಯದಲ್ಲಿ ಪದವಿ/ಸ್ನಾತಕ ಪದವಿ/ಪಿ.ಜಿ. ಡಿಪ್ಲೊಮಾ ಪಡೆದಿರಬೇಕು. ನಿರೂಪಣಾ ಕೌಶಲ ತರಬೇತಿಗೆ ಅರ್ಜಿ ಸಲ್ಲಿಸಲು ಪತ್ರಿಕೋದ್ಯಮ ಸೇರಿದಂತೆ ಇತರೆ ಯಾವುದೇ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಆಸಕ್ತ ಅರ್ಹ ಅಭ್ಯರ್ಥಿ ನಿಗದಿತ ನಮೂನೆಯನ್ನು ಸ್ವವಿವರಗಳೊಂದಿಗೆ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂ. 17, ಭಗವಾನ್‌ ಮಹಾವೀರ ರಸ್ತೆ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಇಲಾಖಾ ಅಂತರ್ಜಾಲ ತಾಣ www.karnatakavarthe.org ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com