ತಾಳಮದ್ದಲೆ ಸಪ್ತಾಹ ಸಮಾರೋಪ

ನಾಗೂರು: ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಸಹಯೋಗದೊಂದಿಗೆ ಧಾರೇಶ್ವರ ಯಕ್ಷಬಳಗ  ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ 'ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹ'ದ ಸಮಾರೋಪ ಸಮಾರಂಭವು ಈಚೆಗೆ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆಯಿತು.
   ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಯಕ್ಷಗಾನ ಈ ನೆಲದ ಒಂದು ಸಾಂಸ್ಕಂತಿಕ ವೈಭವ. ಅದರಲ್ಲಿ ಪಾಲ್ಗೊಳ್ಳುವವರಿಗೆ ಪುರಾಣಗಳ 
ದರ್ಶನದ ಜತೆಗೆ ನಮ್ಮ ಸಂಸ್ಕøತಿ, ಸಾಹಿತ್ಯದ ಸಮೃದ್ಧ ಅನುಭವ ಪ್ರಾಪ್ತವಾಗುತ್ತದೆ. ಇಂತಹ ಶ್ರೀಮಂತ ಕಲೆಯಲ್ಲಿ ಯಾವುದೇ ವಿಕೃತಿ ನುಸುಳುವುದನ್ನು ತಡೆದು, ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆ ಹಿರಿಯರ ಮೇಲಿದೆ ಎಂದು ಹೇಳಿದರು. 
   ಕಲಾವಿದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ನಾಗೂರಿನಲ್ಲಿ ಏಳು ದಿನ ನಡೆದ ತಾಳಮದ್ದಲೆ ವೈಭವ ಅನೂಚಾನವಾಗಿ ಮುಂದುವರಿಯಬೇಕು. ಅದಕ್ಕೆ ಸಹೃದಯಿಗಳು ಈಗ ನೀಡಿದ ಬೆಂಬಲ ಕುಂದಬಾರದು ಎಂದು ಹೇಳಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ಕಲಾ ಸಾಹಿತಿ ಎಚ್. ಜನಾರ್ದನ ಹಂದೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಅತಿಥಿಗಳಾಗಿದ್ದರು.
   ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ ಯಕ್ಷಗಾನ ಸಂಶೋಧಕ ಡಾ. ರಾಘವ ನಂಬಿಯಾರ್ ಅವರನ್ನು ಅಭಿನಂದಿಸಲಾಯಿತು. ಸಪ್ತಾಹಕ್ಕೆ ನೆರವಿತ್ತವರನ್ನು ಗೌರವಿಸಲಾಯಿತು. 
   ಟ್ರಸ್ಟ್‍ನ ಅಧ್ಯಕ್ಷ, ಸುಬ್ರಹ್ಮಣ್ಯ ಧಾರೇಶ್ವರ ಸ್ವಾಗತಿಸಿದರು. ಎನ್. ವಿ. ಪ್ರಕಾಶ ಐತಾಳ್ ವಂದಿಸಿದರು. ಎಂ. ಗೋವಿಂದ ನಿರೂಪಿಸಿದರು. ಸಹ ಸಂಚಾಲಕ ಕೆ. ಬಾಲಕೃಷ್ಣ ಶ್ಯಾನುಭಾಗ್, ಕಲಾಮಂದಿರದ ಮಾಲಕ ಮಂಜುನಾಥ ಉಡುಪ ವೇದಿಕೆಯಲ್ಲಿದ್ದರು. ಸಭಾ ಕರ್ಯಕ್ರಮದ ಬಳಿಕ ಧಾರೇಶ್ವರ, ರಾಘವೇಂದ್ರ ಮಯ್ಯ, ಪರಮೇಶ್ವರ ಭಂಡಾರಿ, ಶಿವಾನಂದ ಕೋಟ, ಪ್ರಭಾಕರ ಜೋಷಿ, ಅಶೋಕ ಭಟ್ ಉಜಿರೆ, ಸದಾನಂದ ಇಡುವಾಣಿ ತಂಡದಿಂದ 'ಸುಧನ್ವ ಮೋಕ್ಷ' ಪ್ರಸಂಗದ ತಾಳಮದ್ದಲೆ ಸಂಪನ್ನವಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com