ಗ್ರೀನ್‌ವ್ಯಾಲಿ ವಿದ್ಯಾರ್ಥಿಗಳಿಂದ ರಾಷ್ಟ್ರಪತಿ ಭೇಟಿ

ಶೀರೂರು: ಗ್ರೀನ್‌ವ್ಯಾಲಿ ನ್ಯಾಶನಲ್‌ ಸ್ಕೂಲ್‌ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳ ತಂಡ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನ. 16ರಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೈಯದ್‌ ಅಬ್ದುಲ್‌ ಖಾದರ್‌ ಬಾಶು ಹಾಗೂ ಪ್ರಾಂಶುಪಾಲ ಜಾನ್‌ ಮ್ಯಾಥ್ಯೂ ನೇತೃತ್ವದ 17 ವಿದ್ಯಾರ್ಥಿಗಳು ಹಾಗೂ ಐವರು ಸಿಬಂದಿ ತಂಡ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿತು.

ರಾಷ್ಟ್ರಪತಿ ಭವನದ ವಿಶೇಷ ಕಾನ್ಫರೆನ್ಸ್‌ ಸಭಾಂಗಣದಲ್ಲಿ 'ಗ್ರೀನ್‌ವ್ಯಾಲಿ' ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಷ್ಟ್ರಪತಿಯವರು ಶೀರೂರಿನಂತಹ ಗ್ರಾಮಾಂತರ ಪ್ರದೇಶದಲ್ಲಿ ಉತ್ಕೃಷ್ಟ ಶಿಕ್ಷಣ ನೀಡುತ್ತಿರುವ 'ಗ್ರೀನ್‌ವ್ಯಾಲಿ' ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಶ್ರಮವನ್ನು ಪ್ರಶಂಸಿಸಿದರು. ತಾಯ್ನಾಡಿನ ಹಿತಕ್ಕಾಗಿ ನಮ್ಮ ಸಾಮರ್ಥ್ಯ ಬಳಸಿಕೊಳ್ಳಬೇಕು. ನಮ್ಮ ದೇಶದ ಇತಿಹಾಸದಿಂದ ವಿದ್ಯಾರ್ಥಿಗಳು ಪಾಠ ಕಲಿಯಬೇಕು ಹಾಗೂ ನಮ್ಮ ಭವ್ಯ ಪರಂಪರೆ ಕಾಪಾಡಿಕೊಳ್ಳುವಂತೆ ರಾಷ್ಟ್ರಪತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಮೊಘಲ್‌ ಗಾರ್ಡನ್‌ ಹಾಗೂ ರಾಷ್ಟ್ರಪತಿ ಭವನವನ್ನು ಗೈಡ್‌ನೊಂದಿಗೆ ನೋಡಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಭವನದಲ್ಲಿ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನ. 13ರಿಂದ 21 ತನಕ 9 ದಿನಗಳ ಹೊಸದಿಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ರಾಷ್ಟ್ರಪತಿ ಅವರನ್ನು ಭೇಟಿಯಾಗುವ ಅಪೂರ್ವ ಅವಕಾಶ ದೊರೆತಿರುವುದು ವಿದ್ಯಾರ್ಥಿಗಳ ಪಾಲಿಗೆ ಹೆಮ್ಮೆಯ ವಿಚಾರ ಎಂದು 'ಗ್ರೀನ್‌ವ್ಯಾಲಿ' ಸಂಸ್ಥೆ ಅಧ್ಯಕ್ಷ ಸೈಯದ್‌ ಅಬ್ದುಲ್‌ ಖಾದರ್‌ ಬಾಶು ಹೇಳಿದರು.

'ಗ್ರೀನ್‌ವ್ಯಾಲಿ' ವಿದ್ಯಾರ್ಥಿಗಳಿಂದ ಸೋನಿಯಾ ಗಾಂಧಿ ಭೇಟಿ

ಗ್ರೀನ್‌ವ್ಯಾಲಿ ನ್ಯಾಶನಲ್‌ ಸ್ಕೂಲ್‌ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳ ತಂಡ ಸಂಸ್ಥೆ ಅಧ್ಯಕ್ಷ ಸೈಯದ್‌ ಅಬ್ದುಲ್‌ ಖಾದರ್‌ ಬಾಶು ಹಾಗೂ ಪ್ರಾಂಶುಪಾಲ ಜಾನ್‌ ಮ್ಯಾಥ್ಯೂ ನೇತೃತ್ವದಲ್ಲಿ ನ. 16ರಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಧಿ ಅವರನ್ನು ಹೊಸದಿಲ್ಲಿಯ ಜನಪಥ್‌ ರಸ್ತೆಯಲ್ಲಿರುವ ಅವರ ಅಧಿಧಿಕೃತ ನಿವಾಸದಲ್ಲಿ ಭೇಟಿ ಮಾಡಿತು.

ಶಾಲಾ ಚಟುವಟಿಕೆಗಳು ಹಾಗೂ ಅಧ್ಯಯನದ ಬಗ್ಗೆ ಸೋನಿಯಾ ಗಾಂಧಿಧಿ ಅವರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳು ತಮಗೆ ದೊರೆತಿರುವ ಉತ್ತಮ ಅವಕಾಶ ಬಳಸಿಕೊಂಡು ಏಕಾಗ್ರತೆಯೊಂದಿಗೆ ಅಧ್ಯಯನ ನಡೆಸಬೇಕು ಎಂದು ಸೋನಿಯಾ ಗಾಂಧಿ ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com