ತಿಂಗಳ ಸಡಗರ; ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ ಸನ್ಮಾನ

ಪಡುಕೋಣೆ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಜಿಲ್ಲೆಯ ವಲಯ 2ರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ 'ತಿಂಗಳ ಸಡಗರ'ದ ನಿಮಿತ್ತ ಪಡುಕೋಣೆಯಲ್ಲಿ ನಡೆದ 'ಹಿರಿಯರೆಡೆಗೆ ಸಾಹಿತ್ಯದ ನಡಿಗೆ' ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಪಿ. ರಾಮಚಂದ್ರಯ್ಯ ಮತ್ತು ಯಕ್ಷಗಾನ ಕಲಾವಿದ ಪಿ. ಎನ್. ಸುರೇಶ ಗಾಣಿಗರನ್ನು ಗೌರವಿಸಲಾಯಿತು. 
                   'ಸಂಸ್ಕೃತಿ ಕಳೆದುಹೋಗುತ್ತಿದೆ' 
   ಶಾಲೆಯಲ್ಲಿ ಅಕ್ಷರ, ಪಠ್ಯಜ್ಞಾನ ಕಲಿಯುವ ಮಕ್ಕಳು ಮನೆಯಲ್ಲಿ ದೂರದರ್ಶನ, ಮೊಬೈಲ್‍ಗಳಲ್ಲಿ ಮುಳುಗುತ್ತಾರೆ. ಆಂಗ್ಲ ಮಾಧ್ಯಮ ಶಿಕ್ಷಣ ತಮ್ಮ ಮಕ್ಕಳ ಪಾಲಿಗೆ ಕಾಮಧೇನುವಾಗುವುದೆಂಬ ಭ್ರಮೆಗೆ ಸಿಲುಕಿರುವ ಪೋಷಕರು ಅವರಿಗೆ ನಮ್ಮ ಸಂಸ್ಕøತಿ ಪರಿಚಯಿಸಲಾಗದ ಶಾಲೆಗೆ ಅವರನ್ನು ಅಟ್ಟುತ್ತಾರೆ.  ಬದುಕಿನ ಪಾಠ ಕಲಿಸುವ ಸಾಹಿತ್ಯದ ಓದಿನಿಂದ ಅವರನ್ನು ವಂಚಿತರಾಗಿ ಮಾಡಲಾಗುತ್ತದೆ. ಇದರಿಂದಾಗಿ ನಮ್ಮ ಸಂಸ್ಕøತಿ ಕಳೆದುಹೋಗುತ್ತಿದೆ ಎಂದು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಹೇಳಿದರು.
  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಜಿಲ್ಲೆ 3180ರ ವಲಯ 2ರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವ ಮಾಸದ ಸಾಹಿತ್ಯಿಕ, ಸಾಂಸ್ಕøತಿಕ ಸರಣಿ 'ತಿಂಗಳ ಸಡಗರ'ದ ನಿಮಿತ್ತ ಪಡುಕೋಣೆಯಲ್ಲಿ ರವಿವಾರ ನಡೆದ 'ಹಿರಿಯರೆಡೆಗೆ ಸಾಹಿತ್ಯದ ನಡಿಗೆ' ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. 
  ಪರಿಷತ್ತಿನ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಮ್ಮ ಆರಂಭಿಕ ಮಾತುಗಳಲ್ಲಿ ಪರಿಷತ್ತಿನ ವಿನೂತನ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ನಾಡು, ನುಡಿ, ಸಾಹಿತ್ಯ, ಸಂಸ್ಕøತಿಯ ಪೋಷಣೆ, ರಕ್ಷಣೆಗೆ ಸಮ್ಮೇಳನ, ಗೋಷ್ಠಿ, ಸಂಕಿರಣಗಳಷ್ಟೆ ಸಾಲವು. ಆ ಉದ್ದೇಶದ ಸಂದೇಶ ಶಾಲೆ, ಮನೆಗಳನ್ನೂ ತಲುಪಬೇಕು. ಈ ನಿಟ್ಟಿನಲ್ಲಿ ದುಡಿದ ಹಿರಿಯರ ಆದರ್ಶ, ಜೀವನೋಲ್ಲಾಸದ ಮಾದರಿ ಸ್ಪೂರ್ತಿಯಾಗಬೇಕು ಎಂದರು.   
  ನಿವೃತ್ತ ಶಿಕ್ಷಕ ಪಿ. ರಾಮಚಂದ್ರಯ್ಯ ಅವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 
ಅವರನ್ನು ಮತ್ತು ಸ್ಥಳೀಯ ಯಕ್ಷಗಾನ ಕಲಾವಿದ ಪಿ. ಎನ್. ಸುರೇಶ ಗಾಣಿಗರನ್ನು ಗೌರವಿಸಲಾಯಿತು. ಅವರೀರ್ವರೂ ತಮ್ಮ ಬದುಕಿನ ಘಟ್ಟಗಳನ್ನು ಸ್ಮರಿಸಿಕೊಂಡರು. 
   ಶಿಕ್ಷಕ ಅಶೋಕಕುಮಾರ ಪ್ರಾರ್ಥನೆ ಹಾಡಿದರು. ನಿವೃತ್ತ ಉಪ ತಹಸಿಲ್ದಾರ್ ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿದರು. ಸಾಹಿತಿ ಪಾರಂಪಳ್ಳಿ ನರಸಿಂಹ ಐತಾಳ್ ವಂದಿಸಿದರು. ಪರಿಷತ್ತಿನ ಬೈಂದೂರು ಹೋಬಳಿ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com