ಶಬರಿಮಲೆಗೆ ವಿಶೇಷ ರೈಲು

ಉಡುಪಿ: ಶಬರಿಮಲೆ ಯಾತ್ರೆ ಪ್ರಯುಕ್ತ ನಿಝಾಮುದ್ದೀನ್‌ - ಕೊಚ್ಚುವೇಲಿ ನಡುವೆ ವಿಶೇಷ ಎಸಿ ಸೂಪರ್‌ ಫಾಸ್ಟ್‌ ರೈಲು ವಾರದಲ್ಲಿ ಎರಡು ದಿನ ಓಡಾಟ ನಡೆಸಲಿದೆ.
       ಡಿ. 3ರಿಂದ ಜ. 29ರ ವರೆಗೆ ಪ್ರತಿ ಮಂಗಳವಾರ ಮತ್ತು ಬುಧವಾರ ರೈಲು ಸಂಖ್ಯೆ: 04094 ರೈಲು ನಿಝಾಮುದ್ದೀನ್‌ ನಿಲ್ದಾಣದಿಂದ ರಾತ್ರಿ 9.35ಕ್ಕೆ ಹೊರಡಲಿದ್ದು, ಕೊಚ್ಚುವೇಲಿ ನಿಲ್ದಾಣವನ್ನು ಗುರುವಾರ ಮತ್ತು ಶುಕ್ರವಾರ ರಾತ್ರಿ 8.30ಕ್ಕೆ ತಲುಪಲಿವೆ. ಡಿ. 7ರಿಂದ ಫೆ. 1ರ ವರೆಗೆ ರೈಲು ಸಂಖ್ಯೆ: 04093 ರೈಲು ಪ್ರತಿ ಶನಿವಾರ ಮತ್ತು ರವಿವಾರ ಕೊಚ್ಚುವೇಲಿಯಿಂದ ರಾತ್ರಿ 12.30ಕ್ಕೆ ಹೊರಡಲಿದ್ದು, ನಿಝಾಮುದ್ದಿನ್‌ ನಿಲ್ದಾಣವನ್ನು ಸೋಮವಾರ ಹಾಗೂ ಮಂಗಳವಾರ ತಲುಪಲಿವೆ.
      ವಿಶೇಷ ರೈಲುಗಳು ಮಥುರಾ, ಕೋಟ, ರಟ್ಲಂ, ದಹೋಡ್‌, ವಡೋದರಾ, ಸೂರತ್‌, ವಾಪಿ, ವಾಸೈ ರೋಡ್‌, ಪನವೆಲ್‌, ರೋಹಾ, ಚಿಪುನ್‌, ರತ್ನಗಿರಿ, ಥಿವಿಮ್‌, ಕರ್ಮಲಿ, ಮಡಗಾಂವ್‌, ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌, ಕಾಸರಗೋಡು, ಕಾಂಞಂಗಾಡ್‌, ಪಯ್ಯನ್ನೂರ್‌, ಕಣ್ಣೂರು, ವಡಕರ, ಕೋಝಿಕೋಡ್‌, ತಿರೂರ್‌, ಶೊರನೂರ್‌, ತ್ರಿಶೂರ್‌, ಅಲುವಾ, ಎರ್ನಾಕುಳಂ ಟೌನ್‌, ಕೊಟ್ಟಾಯಂ, ತಿರುವಳ್ಳ, ಚೆಂಗನ್ನೂರು, ಮಾವೆಲಿಕರ, ಕಾಯಂಕುಳಂ ಹಾಗೂ ಕೊಲ್ಲಂ ಜಂಕ್ಷನ್‌ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com