ಡಿ. 1: ಕಿಶೋರ ಯಕ್ಷ ಸಂಭ್ರಮ ಆರಂಭ

ಉಡುಪಿ: ಯಕ್ಷಶಿಕ್ಷಣ ಟ್ರಸ್ಟ್‌ನಿಂದ ತರಬೇತಿ ಪಡೆದ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಕಿಶೋರ ಯಕ್ಷ ಸಂಭ್ರಮವನ್ನು ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಡಿ. 1ರಂದು ಸಂಜೆ ರಾಜಾಂಗಣದಲ್ಲಿ ಉದ್ಘಾಟಿಸಲಿರುವರು.

ಈ ಪ್ರಯುಕ್ತ ಯಕ್ಷಗಾನ ಪ್ರದರ್ಶನವು ಡಿ. 1ರಿಂದ 18ರ ವರೆಗೆ, ಡಿ. 21ರಿಂದ 29ರ ವರೆಗೆ ಬ್ರಹ್ಮಾವರ ಬಸ್‌ಸ್ಟಾಂಡ್‌ ಸಮೀಪ ಪ್ರದರ್ಶನ ಸಮಿತಿ ಆಶ್ರಯದಲ್ಲಿ ನಡೆಯಲಿದೆ. ಪ್ರತೀ ಪ್ರದರ್ಶನವು ಒಂದುವರೆ ಗಂಟೆ ಅವಧಿಯದಾಗಿದ್ದು ಸುಮಾರು 1200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com