ಟೀ ಬಾಯ್‌ ಪ್ರಧಾನಿಯಾಗಲಾರ: ನರೇಶ್‌ ಅಗ್ರವಾಲ್‌

ಹೊಸದಿಲ್ಲಿ: ಚಹಾ ಮಾರಿಕೊಂಡಿದ್ದ ವ್ಯಕ್ತಿ ರಾಷ್ಟ್ರೀಯ ಪ್ರಜ್ಞೆಯುಳ್ಳ ವ್ಯಕ್ತಿಯಾಗಲಾರ ಮತ್ತು ಅದೇ ಕಾರಣಕ್ಕೆ ದೇಶದ ಪ್ರಧಾನಿಯೂ ಆಗಲಾರ ಎಂದು ಸಮಾಜವಾದಿ ಪಕ್ಷದ ನಾಯಕ ನರೇಶ್‌ ಅಗ್ರವಾಲ್‌ ಅವರು ಬಿಜೆಪಿಯ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ನೀಡಿರುವ ವಿವಾದಾತ್ಮಾಕ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

ತಥಾಕಥಿತ ಜಾತ್ಯತೀತವಾದಿ ಕೂಟದವರಿಗೆ ಡೆಂಗ್ಯು ಪೀಡೆ ತಗಲಿದ್ದು  ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಮೋದಿ ವಿರುದ್ಧ ಈಗ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ ಮುಂತಾಗಿ ಎಲ್ಲ ಢೋಂಗಿ ಸೆಕ್ಯುಲರ್‌ ಪಕ್ಷಗಳ ನಾಯಕರು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಮೋದಿಯವರ ಜನಪ್ರಿಯತೆಯನ್ನು ಯಾರೂ ಸರಿಗಟ್ಟಲಾರರು ಎಂದು ಪಕ್ಷದ ಅಧ್ಯಕ್ಷ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com