ಇಂಟರ್‌ನೆಟ್ ಪ್ರೀತಿ: ವೈದ್ಯೆಗೆ 11.35 ಲಕ್ಷ ರೂ ವಂಚನೆ

ಕಾರ್ಕಳ: ಇಂಟರ್‌ನೆಟ್‌ನ ಮೂಲಕ ಮದುವೆ ಆಗುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ. ಎಗರಿಸಿದ ಆರೋಪಿಯ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ಪೇಟೆಯ ಗಾಂಧಿ ಮೈದಾನದ ಹಾಡಿ ಮನೆ ಲಕ್ಷ್ಮೀ ನಿವಾಸ ಕೆ. ನಾಗೇಶ್ ರಾವ್ ಎಂಬವರ ಪುತ್ರಿ ಆಯುರ್ವೇದ ವೈದ್ಯೆ ಲಾವಣ್ಯ (41) ಮೋಸಗೊಂಡವರು. ಆರೋಪಿ ಅಜ್ಮೀಲ್ ಎಂಬಾತ ಮೋಸ ಮಾಡಿದ ಆರೋಪಿ. 

ಏನಿದು ಪ್ರಕರಣ?: ಅವಿವಾಹಿತೆ ಲಾವಣ್ಯ ರಾವ್ 2013ರ ಮೇ 5ರಂದು ಕನ್ನಡ ಭಾರತ್ ಮ್ಯಾಟ್ರಿಮೊನಿ ಅಂತರ್ಜಾಲದಲ್ಲಿ ತನ್ನ ಮದುವೆಯ ಪ್ರಸ್ತಾವನೆಯನ್ನು ಪ್ರಕಟಿಸಿದ್ದಳು. ಅದಕ್ಕೆ ಅಜ್ಮೀಲ್ ಎಂಬಾತ ಇಂಟರ್‌ನೆಟ್ ಮೂಲಕ ಸಮ್ಮತಿ ಸೂಚಿಸಿದ್ದ. ಬಳಿಕ ಇವರಿಬ್ಬರ ಪ್ರೇಮಕತೆಗಳು ಇಂಟರ್‌ನೆಟ್ ಮೂಲಕವೇ ನಡೆಯುತ್ತಿತ್ತು. 
       ಆದರೆ ಕೆಲವು ದಿನಗಳು ಕಳೆದ ಬಳಿಕ ವಿದೇಶದಲ್ಲಿ(ಇಂಗ್ಲೆಂಡ್)ರುವ ಅಜ್ಮೀಲ್ ಆಕೆಯ ವಿಶ್ವಾಸವನ್ನು ಗಳಿಸಿಕೊಂಡ. ಇದೇ ಸಂದರ್ಭ ಬಳಸಿಕೊಂಡ ಆತ ಆಕೆಯ ಬಳಿ ಸುಳ್ಳೊಂದನ್ನು ಹೇಳಿ ಬಿಟ್ಟ. ನನ್ನ ತಂದೆ ಕತಾರ್‌ನಲ್ಲಿ ಮೃತಪಟ್ಟಿದ್ದಾರೆ. ಅವರ ಶವವನ್ನು ಬಿಡಿಸಲು ನನಗೆ 300 ಮೆರಿಕನ್ ಡಾಲರ್ ಹಣದ ಅವಶ್ಯಕತೆಯಿದೆ. ನಿನ್ನ ಸಹಾಯ ಬೇಕು ಎಂದು ಅಂಗಲಾಚಿಕೊಂಡ. 
       ಪ್ರಿಯತಮನ ಕಷ್ಟಕ್ಕೆ ಸ್ಪಂದಿಸಬೇಕೆಂಬ ದೃಷ್ಟಿಯಿಂದ ಲಾವಣ್ಯ ಆತನಿಗೆ ಹಣ ನೀಡುವ ಭರವಸೆ ನೀಡಿದಳು. ಅಂತೆಯೇ ಕಳೆದ ಜೂ.6, ಜು.17ರಂದು ಆರೋಪಿಯು ಹೊಂದಿದ್ದ ಹೊಸದಿಲ್ಲಿ, ಹೈದರಾಬಾದ್, ತಾತಿಪುರ್, ಮುಂಬಯಿ, ನೋಯ್ಡ, ಬಾಗಲ್‌ಪುರ, ಲಖನೌ ಮುಂತಾದ ಕಡೆಯಿರುವ ಬ್ಯಾಂಕ್ ಖಾತೆಗಳಿಗೆ ಒಟ್ಟು 11.35 ಲಕ್ಷ ರೂ. ಹಣ ಜಮೆ ಮಾಡಿದ್ದಳು. 
   ಆದರೆ ಬಳಿಕ ಆ ವಿಶ್ವಾಸವನ್ನು ಉಳಿಸಿಕೊಳ್ಳದ ಆರೋಪಿ ಇನ್ನೂ ಹಣವನ್ನು ನೀಡುವಂತೆ ಒತ್ತಾಯಿಸಿದ್ದ. ಒಪ್ಪದ ಲಾವಣ್ಯಳಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದ. ಇದೀಗ ಲಾವಣ್ಯ ನ್ಯಾಯ ಒದಗಿಸಿಕೊಡುವಂತೆ ಠಾಣೆಯ ಮೆಟ್ಟಿಲೇರಿದ್ದಾಳೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com