ಪಠ್ಯದಲ್ಲಿ ಕುಂದಗನ್ನಡ ಅಳವಡಿಸುವ ಅಗತ್ಯವಿದೆ: ಪ್ರಾಧ್ಯಾಪಕ ಅನಿಲ್ ಕುಮಾರ್

ಕೋಟ: ಭಾಷೆ, ಸಾಹಿತ್ಯಗಳ ಉಳಿವಿಗೆ ಕುಂದಗನ್ನಡದ ಪಾತ್ರ ಅನನ್ಯ. ಕುಂದಗನ್ನಡವನ್ನು ಜನಪ್ರಿಯ ಗೊಳಿಸುವ ಸಲುವಾಗಿ ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಒಂದು ಅಧ್ಯಯವನ್ನಾಗಿ ಆಯ್ದುಕೊಳ್ಳಬೇಕಾದ ಅಗತ್ಯ ಇದೆ ಎಂದು ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅನಿಲ್ ಕುಮಾರ್ ಹೇಳಿದರು.
     ಕೋಟ ವರುಣ ತೀರ್ಥ ಕೆರೆಯ ಸಮೀಪ ಶುಕ್ರವಾರ ಕೋಟ ಪಂಚ ವರ್ಣ ಯುವಕ ಮಂಡಲದ ವತಿ ಯಿಂದ ನಡೆದ ಸದ್ಭಾವನ –೨೦೧೩ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕೋಟದ ಉದ್ಯಮಿ ವಿಜಯ್ ಶ್ರೀಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ರಾಘ ವೇಂದ್ರ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.
   ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಕೋಟ ಸುರೇಶ್‌ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಕೋಟದ ಉದ್ಯಮಿ ಆನಂದ್ ಸಿ. ಕುಂದರ್, ಉದ್ಯಮಿ ಮುನಿಯಾಲು ಉದಯ್ ಶೆಟ್ಟಿ, ಮಣಿಪಾಲದ ಜಯ ರಾಜ್ ವಿ. ಶೆಟ್ಟಿ, ತಾಲ್ಲೂಕು ಪಂಚಾ ಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ವೆಂಕಟೇಶ್ ಪ್ರಭು, ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಗಾಣಿಗ ಶೇವಧಿ  ಉಪಸ್ಥಿತರಿದ್ದರು.
    ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಮಾನಸ ಜ್ಯೋತಿ ಕೋಣಿ ಇದರ ಮುಖ್ಯಸ್ಥೆ ನೆದರ್‌ಲ್ಯಾಂಡ್‌ ಮೂಲದ ಮಾರ್ಟಿಜ್ ವಾನ್‌ಡೆನ್ ಬ್ಯಾಂಡ್‌ ಅವರನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಲ ಪ್ರತಿಭೆ ಅರ್ಚನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
   ಕಾರ್ಯದರ್ಶಿ ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರ ಆಚಾರ್ ಕೋಟ ಸ್ವಾಗತಿಸಿದರು. ಅಜಿತ್ ಆಚಾರ್ ವಂದಿಸಿದರು. ಶಿವ ರಾಮ ಕಾರ್ಕಡ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com