ಶ್ರೀನಿವಾಸ ಆಚಾರ್ಯರಿಗೆ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ

ಕೋಟ: ಯಕ್ಷಗಾನದ ಮೂಲಕ ಭಾಷಾಜ್ಞಾನ, ಕಾಲ್ಪನಿಕ ಶಕ್ತಿ ಹಾಗೂ ಪೌರಾಣಿಕ ಜ್ಞಾನ ವೃದ್ಧಿಯಾಗುತ್ತದೆ ಮತ್ತು ವಿದ್ಯಾವಂತನಲ್ಲದಿದ್ದರೂ ಯಾವುದೇ ಸುಶಿಕ್ಷಿತನನ್ನು ಮೀರಿಸುವ ಪ್ರೌಢಿಮೆಯನ್ನು ಪಡೆಯಲು ಯಕ್ಷಗಾನ ಸಹಕಾರಿಯಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶಾನಡಿ ಅಜೀತ್‌ ಕುಮಾರ್‌ ಹೆಗ್ಡೆ ಹೇಳಿದರು.

ಅವರು ಸಾಲಿಗ್ರಾಮದಲ್ಲಿ ನಡೆದ ಸಾಲಿಗ್ರಾಮ ಮೇಳದ 46ನೇ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಳ್ಳಿ ಸೋಮನಾಥ ಹೆಗ್ಡೆ ಸ್ಮಾರಕ ಪ್ರಶಸ್ತಿಯನ್ನು ಮೇಳದ ರಂಗಪರಿಕರಗಳ ತಯಾರಕ ಪಳ್ಳಿ ಶ್ರೀನಿವಾಸ ಆಚಾರ್ಯರವರಿಗೆ ಪ್ರಧಾನ ಮಾಡಿ ಮಾತನಾಡಿದರು. ರಂಗಪರಿಕರ ತಯಾರಕರೋರ್ವರಿಗೆ ಮೇಳದ ಇತಿಹಾಸದಲ್ಲಿಯೇ ಮೊದಲ ಬಾರಿ ಇಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಣಿಪಾಲ ಎಂ.ಐ.ಟಿ. ಕಾಲೇಜಿನ ಉಪನ್ಯಾಸಕ ಪ್ರೊ|.ಎಸ್‌.ವಿ. ಉದಯ ಕುಮಾರ್‌ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಲಿಗ್ರಾಮ ಗುರುನರಸಿಂಹ ದೇವಾಲಯದ ಆಡಳಿತ ಮೊಕ್ತೇಸರ ಜಗದೀಶ್‌ ಕಾರಂತ ಅವರು ಮೇಳದ ತಿರುಗಾಟಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ, ಯುವ ಪ್ರಸಂಗಕರ್ತ ಬೇಳೂರು ವಿಷ್ಣು ಮೂರ್ತಿ ನಾಯಕ್‌, ಮೇಳದ ಯಜಮಾನ ಪಳ್ಳಿ ಕಿಶನ್‌ ಹೆಗಡೆ ಉಪಸ್ಥಿತರಿದ್ದರು.

ಶ್ರೀನಿವಾಸ್‌ ಅಮೀನ್‌ ಪ್ರಶಸ್ತಿ ಪತ್ರ ವಾಚಿಸಿ, ರಾಮಕೃಷ್ಣ ಹೇಳೆì ಕಾರ್ಯಕ್ರಮ ನಿರೂಪಿಸಿದರು.

ಪಳ್ಳಿ ಸೋಮನಾಥ ಹೆಗ್ಡೆ ಸ್ಮಾರಕ ಪ್ರಶಸ್ತಿಯನ್ನು ಪಳ್ಳಿ ಶ್ರೀನಿವಾಸ ಆಚಾರ್ಯರವರಿಗೆ ನೀಡಿ ಗೌರವಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com