ಜಿಲ್ಲಾ ಮಟ್ಟದ ಮೊಗವೀರ ಕ್ರೀಡಾಕೂಟ ಉದ್ಘಾಟನೆ

ಕುಂದಾಪುರ: ಕ್ರೀಡೆ ಅಂದ್ರೆ ಕ್ರಿಕೆಟ್ ಎಂಬ ಭಾವನೆ ದೂರ ಆಗಬೇಕು. ನಮ್ಮ ನಡುವೆ ಅನೇಕ ಗ್ರಾಮೀಣ ಕ್ರೀಡೆಗಳಿಗೆ. ಅದನ್ನು ಪ್ರೋತ್ಸಾಹಿಸುವ ದಷ್ಟಿಯಿಂದ ಮೊಗವೀರ ಯುವ ಸಂಘಟನೆ ಪ್ರತಿ ವರ್ಷವೂ ಅಲ್ಲಲ್ಲಿ ಕ್ರೀಡಾಕೂಟ ಸಂಘಟಿಸುತ್ತಲೇ ಬಂದಿದೆ. ಕುಂದಾಪುರದಲ್ಲಿ ಈ ಬಾರಿ ಸಂಘಟಿಸಿರುವ ಕ್ರೀಡಾಕೂಟ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದರು. 
     ಇಲ್ಲಿನ ಗಾಂಧಿ ಮೈದಾನದಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಘಟಕ ಹಾಗೂ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ ಜಂಟಿಯಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಮೊಗವೀರ ಕ್ರೀಡಾಕೂಟ-2013 ಉದ್ಘಾಟಿಸಿ ಅವರು ಮಾತನಾಡಿದರು. 
     ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಸಂಘಟನೆ ಶಿಕ್ಷಣ, ಆರೋಗ್ಯಕ್ಕೆ ನೀಡಿದ ಪ್ರಾಶಸ್ತ್ಯ ಕ್ರೀಡೆಗೂ ನೀಡುತ್ತಿದೆ. ಸಮಾಜ ಇದರ ಪ್ರಯೋಜನ ಪಡೆದು ಸಶಕ್ತವಾಗಿ ಬೆಳೆಯಬೇಕು ಎಂದು ಅವರು ಹೇಳಿದರು. 
     ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘ ಮುಂಬೆ ಇದರ ಅಧ್ಯಕ್ಷ ಸುರೇಶ್ ಆರ್.ಕಾಂಚನ್ ಕ್ರೀಡಾಜ್ಯೋತಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಕೇಶವ ಕುಂದರ್ ಗೌರವ ರಕ್ಷೆ ಸ್ವೀಕರಿಸಿದರು.ಉದ್ಯಮಿ ಆನಂದ ಸಿ.ಕುಂದರ್, ಉಡುಪಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೇಯಾನ್, ಉದ್ಯಮಿ ರಾಮ ನಾಯ್ಕ, ತಾಲೂಕು ಯುವಜನ ಮತ್ತು ಸೇವಾ ಕ್ರೀಡಾಕಾರಿ ದಿನಕರ ಹೆಗ್ಡೆ, ಉದ್ಯಮಿ ಕೆ.ಕೆ.ಕಾಂಚನ್, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ ಟಿ.ಮೆಂಡನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಸತೀಶ್ ಎಂ.ನಾಯ್ಕ, ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಅಧ್ಯಕ್ಷ ಎಂ.ಎಂ.ಸುವರ್ಣ, ಮೊಗವೀರ ಯುವ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಕಾಂಚನ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ರಮೇಶ ವಿ.ಕುಂದರ್ ಕೋಟ, ಕ್ರೀಡಾ ಕಾರ್ಯದರ್ಶಿ ಗಣೇಶ ಮೆಂಡನ್, ಪುರಸಭೆ ಸದಸ್ಯರಾದ ಉದಯ ಮೆಂಡನ್, ವಿಠಲ ಕುಂದರ್, ಉಡುಪಿ ಜಿಲ್ಲಾ ದೆಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಮಧುಶ್ರೀ ಪ್ರಾರ್ಥಿಸಿದರು. 
    ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷ ಸದಾನಂದ ಬಳ್ಕೂರು ಸ್ವಾಗತಿಸಿದರು. ರಮೇಶ್ ಕುಂದರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಅಶೋಕ ತೆಕ್ಕಟ್ಟೆ ಮತ್ತು ಸುಧಾಕರ ಕಾಂಚನ್ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಕಾಂಚನ್ ವಂದಿಸಿದರು. ಕ್ರೀಡಾಕೂಟ ಉದ್ಘಾಟನೆಗೆ ಮೊದಲು ಆಕರ್ಷಕ ಪುರಮೆರವಣಿಗೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com