ಮರವಂತೆ ಗ್ರಾ.ಪಂ. ನಿಂದ ಶಾಲೆಗಳಿಗೆ ಶುದ್ಧನೀರು ಘಟಕ ಕೊಡುಗೆ

ಮರವಂತೆ: ಗ್ರಾಮ ಪಂಚಾಯತ್ ಮರವಂತೆ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಮರವಂತೆ ಪೂರ್ವ ಮತ್ತು ಕರಾವಳಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ ರೂ 12 ಸಾವಿರ ಮೌಲ್ಯದ ಅಕ್ವಾಗಾರ್ಡ್ ಕುಡಿಯುವ ನೀರು ಶುದ್ಧೀಕರಣ ಉಪಕರಣಗಳನ್ನು ನೀಡಿತು. ಈಚೆಗೆ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ಶಾಲೆಗಳ ಮುಖ್ಯಸ್ಥರಿಗೆ ಅವುಗಳನ್ನು ಹಸ್ತಾಂತರಿಸಿದರು. ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ, ಸಿಬಂದಿ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com