ದೆಹಲಿಯ 7ನೇ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ದೆಹಲಿಯ 7ನೇ ಮುಖ್ಯಮಂತ್ರಿಯಾಗಿ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಅವರು ರಾಮಲೀಲಾ ಮೈದಾನದಲ್ಲಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

45 ವರ್ಷ ವಯಸ್ಸಿನ ಅರವಿಂದ ಕೇಜ್ರಿವಾಲ್‌ ಜತೆ 26 ವರ್ಷದ ಯುವತಿ ರಾಖೀ ಬಿರ್ಲಾ ಸೇರಿದಂತೆ ಆರು ಶಾಸಕರು ರಾಜ್ಯಪಾಲ ನಜೀಬ್‌ ಜಂಗ್‌ ಅವರಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೇಜ್ರಿವಾಲ್‌ ಸಹಿತ ಆರು ಶಾಸಕರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶಪಥಗ್ರಹಣದ ಬಳಿಕ ಸೇರಿದ ಜನಸಾಮಾನ್ಯರನ್ನುದ್ದೇಶಿಸಿ ಮಾತನಿಡಿದ ಕೇಜ್ರಿವಾಲ್‌ ಅವರು ಇಂದು ಜನಸಾಮಾನ್ಯರಿಗೆ ಜಯ ಸಿಕ್ಕಿದೆ,ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಲ್ಲ ಜನರ ಸೇವಕನಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ ಎಂದರು.
ನನ್ನಲ್ಲಿ ಮಂತ್ರದಂಡವಿಲ್ಲವಿಲ್ಲ ಆಧಿಕಾರ ಸ್ವೀಕರಿಸಿದ ಕೂಡಲೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಲ್ಲದೆಹಲಿಯ ಜನರು ಸಹಕರಿಸಿದ ರೆ ಪರಿಹಾರ ಸಾಧ್ಯ ಎಂದರು . ಹಿಂದು ಮುಸ್ಲಿಂ ಕ್ರೈಸ್ತರೆಲ್ಲರು ಒಂದೇ ಎಂದು ತೊರಿಸುವುದೇ ನಮ್ಮ ಗುರಿ ಎಂದರು.
ಲಂಚ ಪಡೆಯುವುದಿಲ್ಲ ಮತ್ತು ಲಂಚ ನೀಡುವುದಿಲ್ಲ ಎಂದು ಜನರಿಗೆ ಪ್ರಮಾಣ ವಚನ ಭೋದಿಸಿದ್ದು ವಿಶೇಷವಾಗಿತ್ತು. ಲಂಚವನ್ನು ವಿರೋಧಿಸಲು ಸಹಾಯವಾಣಿಯೊಂದನ್ನು ಪ್ರಾರಂಭಿಸುವುದಾಗಿ ಕೇಜ್ರಿವಾಲ್‌ ಹೇಳಿದರು . ಮುಂದಿನದ್ದು ಹೋರಾಟದ ಹಾದಿ, ದೆಹಲಿಯ ಅಭಿವೃದ್ಧಿಯೆ ನಮ್ಮ ಗುರಿ ಎಂದರು. 
 ದೇಶದ ರಾಜಕೀಯ ಇತಿಹಾಸವೆ ಕಂಡಿರದ ವಿಶೇಷಗಳಿಗೆ ರಾಮಲೀಲಾ ಮೈದಾನ ಇಂದು ಸಾಕ್ಷಿಯಾಯಿತು.
     ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತಿರುವ ಅರವಿಂದ ಕೇಜ್ರಿವಾಲ್‌ ದೆಹಲಿ ಕಂಡ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
     ದೇಶದ ವಿವಿಧ ಮೂಲೆಗಳಿಂದ ಸ್ವಯಂ ಪ್ರೇರಿತರಾಗಿ ಆಗಮಿಸಿದ ಆಮ್‌ ಆದ್ಮಿ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಹಾಗೂ ದೆಹಲಿಯ ಜನರು  ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಂಡರು. ಮೆಟ್ರೋ ರೈಲಿನ ಮೂಲಕ ರಾಮಲೀಲಾ ಮೈದಾನಕ್ಕೆ ಬಂದಿಳಿದ  ಅರವಿಂದ ಕೇಜ್ರಿವಾಲ್‌ ಹಾಗೂ ಅವರ ಪಕ್ಷದ ಎಲ್ಲ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದರು .
    ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ  ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಣ ಸಂತೋಷ್‌ ಹೆಗ್ಡೆ, ಮಾಜಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಹಾಗೂ ನಿವೃತ್ತ ಅಡ್ಮಿರಲ್‌ ಎಲ್‌. ರಾಮದಾಸ್‌ ಉಪಸ್ಥಿತರಿದ್ದರು. ಉಳಿದಂತೆ ಆಮ್‌ ಆದ್ಮಿ ಪಕ್ಷದ ಎಲ್ಲ ಶಾಸಕರು, ಕೇಜ್ರಿವಾಲ್‌ ಕುಟುಂಬ ಜನಸಾಮಾನ್ಯರೊಂದಿಗೆ ಕುಳಿತಿದ್ದರು. ಪ್ರಮಾಣ ವಚನ ಸ್ವೀಕರಿಸಲಿರುವ ಆರು ಸಚಿವರು ಮಾತ್ರ ಪ್ರತ್ಯೇಕ ಸ್ಥಳಗಳಲ್ಲಿ ಆಸೀನರಾಗಿದ್ದರು  ಶಪಥಗ್ರಹಣದ ಬಳಿಕ ಕೇಜ್ರಿವಾಲ್‌ ಅವರು ನೇರವಾಗಿ ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com