ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ ದೀಪೋತ್ಸವ

ಬಾರಕೂರು: ದೇವರಿಗೆ ನೀಡುವ ಭಕ್ತಿಯ ಸಮರ್ಪಣೆಯಿಂದ ಸಕಲ ಭಾಗ್ಯಗಳು ಲಭಿಸುತ್ತದೆ ಎಂದು ಹಾಸನ ಅರೆಮಾದನಹಳ್ಳಿ ಶ್ರೀಗುರು ಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಹೇಳಿದರು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಜರುಗಿದ ರಂಗ ಪೂಜಾದಿ ದೀಪೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಾಮರಸ್ಯ, ಸ್ವಾರ್ಥ ರಹಿತವಾಗಿ ಸಾಮೂಹಿಕವಾಗಿ ಸಮಾಜಸೇವೆ ಮಾಡಿದಲ್ಲಿ ಅದು ದೇವರಿಗೆ ಸಲ್ಲುತ್ತದೆ ಎಂದರು. 

ಕಟಪಾಡಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ಸಂಘ ಸಂಸ್ಥೆ, ದೇವಾಲಯಗಳ ಆಡಳಿತಗಾರರು ನಮ್ಮದು ಎನ್ನುವ ಭಾವನೆಯಲ್ಲಿ ಸಮಾಜಕ್ಕಾಗಿ ದುಡಿದಾಗ ಭದ್ರ ಸಮಾಜ ರೂಪುಗೊಳ್ಳುತ್ತದೆ ಎಂದರು. 

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ವಾದಿರಾಜ ಆಚಾರ್ಯ ನೇಜಾರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತಾರಾಮ ಶೆಟ್ಟಿ, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ರಿಸರ್ಚ್ ಡೆವಲಪ್‌ಮೆಂಟ್ ಸೆಂಟರ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಗೋಪಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. 

ಹಿರಿಯ ಗ್ರಾಮ ಮೊಕ್ತೇಸರ ವ್ಯಾಸರಾಯ ಆಚಾರ್ಯ ಕಟ್ಟೆಹಕ್ಲು, ಭಾಸ್ಕರ ಆಚಾರ್ಯ ಪೆರ್ಡೂರು, ಶಿವರಾಮ ಆಚಾರ್ಯ ಪಡುಕುಡೂರು, ವ್ಯಾಸರಾಯ ಆಚಾರ್ಯ ನಿಡಂಬೂರು ಬಾಬುರಾಯ ಆಚಾರ್ಯ ನಿಸ್ರಾಣೆ ಅವರನ್ನು ಸನ್ಮಾನಿಸಲಾಯಿತು. ಕನ್ನಡದಲ್ಲಿ ಪಿಎಚ್‌ಡಿ ಮಾಡಿದ ಡಾ. ರಮೇಶ ಆಚಾರ್ಯ ಬಸ್ರೂರು, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲ ಆಚಾರ್ಯ ಹೈಕಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮದ್ದಳೆಗಾರ ಚಂದ್ರಯ್ಯ ಆಚಾರ್ಯ ಗೋಳಿಯಂಗಡಿ, ಜನಾರ್ದನ ಆಚಾರ್ಯ ಬಂಡೀಮಠ, ಕೇಶವ ಆಚಾರ್ಯ ಕರ್ವಾಲು ಅವರನ್ನು ಅಭಿನಂದಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com