ಬೈಂದೂರು: ರೈಲ್ವೆ ನಿಲ್ದಾಣದಲ್ಲಿ ಪಿ.ಆರ್.ಎಸ್. ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ

ಬೈಂದೂರು: ಕೊಂಕಣ ರೆಲ್ವೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಉಳ್ಳಾಲದಿಂದ ತೋಕೂರು ವರೆಗಿನ ರೆಲ್ವೆ ವಿಂಗ್‌ನ್ನು ಕೊಂಕಣ ರೆಲ್ವೆ ವ್ಯಾಪ್ತಿಗೆ ತರುವ ಬಗ್ಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ರೆಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಇದರಿಂದಾಗಿ ಕೊಂಕಣ ರೆಲ್ವೆ ಆದಾಯ ಹೆಚ್ಚಳವಾಗಿ ಈ ಭಾಗದ ರೆಲ್ವೆ ನಿಲ್ದಾಣಗಳಲ್ಲಿ ಅಭಿವದ್ಧಿ ಕಾರ್ಯ ಕೆಗೊಳ್ಳಲು ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. 

ಅವರು ಇಲ್ಲಿನ ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ಕಂಪ್ಯೂಟರೆಸ್‌ಡ್ ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟಮ್ ಉದ್ಘಾಟಿಸಿ ಮಾತನಾಡಿದರು. 

ದೇಶದಲ್ಲಿ ಪ್ರಥಮ ಬಾರಿಗೆ ಇ ಶ್ರೇಣಿಯ ರೆಲ್ವೆ ನಿಲ್ದಾಣವೊಂದು ಪಿಆರ್‌ಎಸ್ ಸೌಲಭ್ಯ ಪಡೆದ ಹೆಗ್ಗಳಿಕೆ ಹೊಂದಿದೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಶ್ರೀ ಕ್ಷೇತ್ರ ಕೊಲ್ಲೂರಿಗೆ ಹೋಗುವ ಭಕ್ತರಿಗೆ ಸೌಲಭ್ಯ ಒದಗಿಸುವುದು ಇಲಾಖೆಯ ಕರ್ತವ್ಯ ಎಂದ ಅವರು, ಮುಂದಿನ ದಿನಗಳಲ್ಲಿ ಇಲ್ಲಿನ ರೆಲ್ವೆ ನಿಲ್ದಾಣದ ಅಭಿವದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 

ಶಾಸಕ ಕೆ. ಗೋಪಾಲ ಪೂಜಾರಿ ಅವರು ಆಸ್ಕರ ಫರ್ನಾಂಡಿಸ್ ಅವರ ಸಂಸದ ನಿಧಿಯಿಂದ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ತಂಗುದಾಣ ಉದ್ಘಾಟಿಸಿ, ಈ ರೆಲ್ವೆ ನಿಲ್ದಾಣದ ಅಭಿವದ್ಧಿಗೆ ರಾಜ್ಯ ಸರಕಾರದಿಂದ ಬರಬೇಕಾದ ಇನ್ನೂ 2.34 ಕೋಟಿ ಅನುದಾನವನ್ನು ಶೀಘ್ರ ಬಿಡುಗಡೆಯಾಗುವಂತೆ ಕ್ರಮ ಕೆಗೊಳ್ಳಲಾಗುವುದು ಎಂದರು. 

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕಷ್ಣಪ್ರಸಾದ ಅಡ್ಯಂತಾಯ, ಕೊಂಕಣ ರೆಲ್ವೆ ಅಧಿಕಾರಿ ಶ್ರೀಧರ ಭಟ್ ಉಪಸ್ಥಿತರಿದ್ದರು. ಮೂಕಾಂಬಿಕಾ ರೆಲ್ವೆ ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com