ಬೈಂದೂರಿನಲ್ಲಿ 'ಸುರಭಿ ಜೈಸಿರಿ'

 ಬೈಂದೂರು: ಇಲ್ಲಿನ ಸುರಭಿ ಸಾಂಸ್ಕೃತಿಕ, ಸಾಹಿತ್ಯಿಕ ವೇದಿಕೆಯ 14ನೆಯ ವಾರ್ಷಿಕ ಸಂಭ್ರಮಾಚರಣೆ 'ಸುರಭಿ ಜೈಸಿರಿ' 11ರಿಂದ ಮೂರು ದಿನ ಸಂಜೆ 6 ಗಂಟೆಯಿಂದ ಶಾರದಾ ವೇದಿಕೆಯಲ್ಲಿ ನಡೆಯಲಿದೆ. 
   ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಉಮೇಶ ಶ್ಯಾನುಭಾಗರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಸರಣಿಯನ್ನು 12ರಂದು ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಕಲಾಸಂದೇಶ ನೀಡುವರು. ಹಿರಿಯ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ಸನ್ಮಾನ, ಗುರುರಾಜ ಗಂಟಿಹೊಳೆ ಅವರಿಂದ ವಿವೇಕ ಚಿತ್ರೋತ್ಸವ, ಸುರಭಿ ಬಾಲಕಿಯರ ತಂಡದಿಂದ ಲವಕುಶ ಯಕ್ಷಗಾನ ಪ್ರದರ್ಶನ ನಡೆಯಲಿವೆ.
   13ರಂದು ಸ್ಥಳೀಯ ಪ್ರಮುಖರಾದ ಕೆ. ಬಾಬು ಶೆಟ್ಟಿ, ಸುಪ್ರೀತಾ ದೀಪಕ್ ಶೆಟ್ಟಿ, ಡಾ. ಸುಬ್ರಹ್ಮಣ್ಯ ಭಟ್, ಕೊಡೇರಿ ವಾಸುದೇವ ಕಾರಂತ, ಚೆನ್ನಕೇಶವ ಉಪಾಧ್ಯಾಯ, ರಾಮ ಮೇಸ್ತ ಅವರ ಉಪಸ್ಥಿತಿಯಲ್ಲಿ ವಿದ್ವಾನ ಮಧೂರು ಬಾಲಸುಬ್ರಹ್ಮಣ್ಯಂ ಅವರು ಬೆಂಗಳೂರಿನಲ್ಲಿ ಖ್ಯಾತ ತಬಲಾ ವಾದಕರಾಗಿರುವ ಭವಾನಿಶಂಕರ ಉಪ್ಪುಂದ ಅವರನ್ನು ಸನ್ಮಾನಿಸುವರು. ಆ ಬಳಿಕ ಸುರಭಿಯ ವಿದ್ಯಾರ್ಥಿಗಳಿಂದ ನಾದ ಸುಧಾರಸ, ಭ್ರಮಾಲೋಕ, ಜಾನಪದ ನೃತ್ಯ ವೈವಿಧ್ಯ ಪ್ರದರ್ಶನಗೊಳ್ಳಲಿವೆ.
    ಕೊನೆಯ ದಿನವಾದ 14ರಂದು ಪ್ರಸಿದ್ಧ ಕವಿ ಎಚ್. ಡುಂಡಿರಾಜ್ ಅವರಿಗೆ ಬೈಂದೂರಿನ ಐತಿಹ್ಯನಾಮವನ್ನು ಪ್ರತಿನಿಧಿಸುವ 'ಬಿಂದುಶ್ರೀ' ಪ್ರಶಸ್ತಿ ಪ್ರದಾನ ನಡೆಯುವುದು. ಸಚಿವ ಅಭಯಚಂದ್ರ ಜೈನ್, ಶಾಸಕ ಕೆ. ಗೋಪಾಲ ಪೂಜಾರಿ, ಲೇಖಕ ಯು. ಚಂದ್ರಶೇಖರ ಹೊಳ್ಳ, ಜಾದೂಗಾರ ಓಂಗಣೇಶ, ತಾ. ಪಂ. ಸದಸ್ಯ ಎಸ್. ರಾಜು ಪೂಜಾರಿ, ಉದ್ಯಮಿ ಕೆ. ವೆಂಕಟೇಶ ಕಿಣಿ ಭಾಗವಹಿಸುವರು. ವಿದ್ಯಾರ್ಥಿಗಳಿಂದ ನಾಟ್ಯಾರಾಧನ, ನೃತ್ಯ ರೂಪಕ, ನೃತ್ಯ-ಕಾವ್ಯ-ಕುಂಚ ವೈಭವ ಪ್ರಸ್ತುತಗೊಲ್ಳಲಿವೆ ಎಂದು ಸುರಭಿ ಪ್ರಕಟಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com