ದೇವಾಡಿಗ ವೈಭವ: ಹಿಂದುಳಿದ ವರ್ಗಗಳ ಮೀಸಲು ಪ್ರಮಾಣ ಹೆಚ್ಚಿಸಿ: ಸಿಂಧ್ಯಾ

ಬೈಂದೂರು: ಸಂಘಟನೆಗಳು ಸಮಾಜದ ಅಭಿವೃದ್ಧಿಗಾಗಿ ಪೂರಕ ಕೆಲಸ ನಡೆಸಬೇಕು. ದೇಶದಲ್ಲಿ ಶೇ. 65 ಜನರು ಹಿಂದುಳಿದವರಾಗಿದ್ದು, ಕೇವಲ ಶೇ.27 ಮಂದಿಗೆ ಮಾತ್ರ ಮೀಸಲುದೊರೆತಿದೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಶೇ.69 ಮೀಸಲುನೀಡುತ್ತಿದ್ದು, ಈ ಬಗ್ಗೆ ಎಲ್ಲ ರಾಜ್ಯದಲ್ಲೂ ಮೀಸಲು ಪ್ರಮಾಣ ಹೆಚ್ಚಿಸಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗಿದೆ ಎಂದು ಮಾಜಿ ಗೃಹ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು. 

ಇಲ್ಲಿನ ಜೆಎನ್‌ಆರ್ ಕಲಾ ಮಂದಿರದಲ್ಲಿ ಬ್ಲೂಸ್ಟಾರ್ ಕ್ರಿಕೆಟ್ ಕ್ಲಬ್ ಹಾಗೂ ಬೈಂದೂರು ದೇವಾಡಿಗ ಸಂಘದ ಆಶ್ರಯದಲ್ಲಿ ನಡೆದ ದೇವಾಡಿಗ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮುಖ್ಯ ಅತಿಥಿ, ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಬೈಂದೂರಿನಲ್ಲಿ ದೇವಾಡಿಗ ಸಭಾಭವನ ನಿರ್ಮಿಸುವುದಾದರೆ ತನ್ನ ಸಂಸದ ನಿಧಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಬಿ.ಎಸ್. ಶೇರಿಗಾರ್ ಉದ್ಘಾಟಿಸಿದರು. ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬಿ.ಜಿ. ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. 

ಶಾಸಕ ಕೆ.ಗೋಪಾಲ ಪೂಜಾರಿ, ಮುಂಬಯಿ ದೇವಾಡಿಗರ ಸಂಘದ ನಿಕಟ ಪೂರ್ವಾಧ್ಯಕ್ಷ ಎಚ್. ಮೋಹನ್‌ದಾಸ್, ರಾಜ್ಯ ದೇವಾಡಿಗರ ಸಂಘದ ಉಪಾಧ್ಯಕ್ಷ ವಾಮನ ಮರೋಳಿ, ರಘುರಾಮ್ ದೇವಾಡಿಗ, ಹಿರಿಯ ರಂಗನಟ ಗಿರೀಶ್ ಬೈಂದೂರು, ಮಾಜಿ ತಾ.ಪಂ. ಸದಸ್ಯ ಕೆ.ಭಾಸ್ಕರ ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ವಾಸು ದೇವಾಡಿಗ, ಮಾಜಿ ಜಿ.ಪಂ. ಉಪಾಧ್ಯಕ್ಷರಾದ ರಾಜು ದೇವಾಡಿಗ, ಶಾರದಾ ಎಂ.ಡಿ. ಬಿಜೂರು, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯೆ ಗೌರಿ ದೇವಾಡಿಗ ಬಿಜೂರು, ಸುಂದರ್ ಮೊಯ್ಲಿ, ಮಣಿಪಾಲದ ಅಸಿಸ್ಟೆಂಟ್ ಪ್ರೊಫೆಸರ್ ರಾಘವೇಂದ್ರ ಜಿ., ಕೆಆರ್‌ಎಸ್‌ಎಸ್ ಬ್ಯಾಂಕ್ ಮಾಜಿ ನಿರ್ದೇಶಕ ರಾಮಚಂದ್ರ ದೇವಾಡಿಗ, ಉಡುಪಿ ದೇವಾಡಿಗರ ಸಂಘದ ಅಧ್ಯಕ್ಷ ಯು. ಗಣೇಶ ದೇವಾಡಿಗ, ಕಾರ್ಕಳ ದೇವಾಡಿಗ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ದೇವಾಡಿಗ, ಹರಿ ದೇವಾಡಿಗ, ದುಬೈ ಉದ್ಯಮಿ ಶೀನ ದೇವಾಡಿಗ, ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ದಿನೇಶ ದೇವಾಡಿಗ ಉಪಸ್ಥಿತರಿದ್ದರು. 

ಈ ಸಂದರ್ಭ ಮೂಲ್ಕಿ ಜಯಾನಂದ ದೇವಾಡಿಗ, ರಂಗಕರ್ಮಿ ಬಿ.ಮಾಧವ ರಾವ್, ಬಿ.ಜಿ. ಮೋಹನ್ ದಾಸ್, ಯಕ್ಷಗಾನ ಕಲಾವಿದ ಗುಣಪಾಲ ಉಡುಪಿ, ವೇಣಿ ಮರೋಳಿ ಸುರೇಶ ದೇವಾಡಿಗ ಪಡುಕೋಣಿ ಅವರನ್ನು ಸನ್ಮಾನಿಸಲಾಯಿತು. ಕೆ.ನಾರಾಯಣ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು, ಚಂದ್ರ ದೇವಾಡಿಗ ಸ್ವಾಗತಿಸಿದರು, ಜನಾರ್ದನ ದೇವಾಡಿಗ ನಿರೂಪಿಸಿದರು. ಕೃಷ್ಣ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com