ಬೈಂದೂರು ಚರ್ಚ್‌ಗೆ ಉಡುಪಿ ಬಿಷಪ್ ಭೇಟಿ

ಬೈಂದೂರು: ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಡಾ. ಜೆರಾಲ್ಡ್ ಐಸಾಕ್ ಬೈಂದೂರಿನ ಹೋಲಿ ಕ್ರಾಸ್ ಚರ್ಚ್‌ಗೆ ಪ್ರಥಮ ಬಾರಿ ಅಧಿಕೃತ ಭೇಟಿ ನೀಡಿದರು. 
     ನಂತರ ಮಾತನಾಡಿದ ಅವರು, ಜೀವನ ಪ್ರಯಾಣದಲ್ಲಿ ನಮ್ಮೆಲ್ಲರ ಜೀವನವೆಂಬುದು ಒಂದು ಹೂವು ಇದ್ದಂತೆ. ಅದು ಅರಳಿ ಮುದುಡುವ ಮಧ್ಯದಲ್ಲಿ ತನ್ನ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುವಂತೆ, ನಮ್ಮ ಹುಟ್ಟು ಸಾವಿನ ಮಧ್ಯೆ ಇರುವ ಜೀವನದಲ್ಲಿ ಎಲ್ಲರನ್ನೂ ಪ್ರೀತಿಸಿ, ಗೌರವಿಸುವುದನ್ನು ಕಲಿಯಬೇಕು. ಅಲ್ಲದೆ ಧಾರ್ಮಿಕತೆಯ ಮೂಲಕ ನಮ್ಮ ಜೀವನದ ಪ್ರತಿ ಕ್ಷಣವನ್ನು ಪಾವನ ಮಾಡಿಕೊಳ್ಳುವುದರ ಜತೆಗೆ ಎಲ್ಲರನ್ನೂ ಆಕರ್ಷಿಸುವಂತಾಗಬೇಕು ಎಂದರು. 
    ಬೈಂದೂರು ಚರ್ಚ್‌ನ ಧರ್ಮಗುರು ರೆ.ಫಾ. ರೊನಾಲ್ಡ್ ಮಿರಾಂದ ನೇತೃತ್ವದಲ್ಲಿ ಧರ್ಮಾಧ್ಯಕ್ಷರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ರೆ.ಫಾ. ರಾಯಲ್ ನಜ್ರೆತ್, ರೆ.ಫಾ. ಒಲಿವೆರಾ ನಜ್ರೆತ್, ಚರ್ಚ್‌ನ ಉಪಾಧ್ಯಕ್ಷ ಡೇನಿಯಲ್ ನಜ್ರೆತ್, ಕಾರ್ಯದರ್ಶಿ ಸಿಸಿಲಿಯಾ ರೆಬೆರೊ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com