ಸಂವಿಧಾನ ಶಿಲ್ಪಿಯ 57ನೇ ಪುಣ್ಯ ಸ್ಮರಣೆ

ಬೈಂದೂರು: ಇಲ್ಲಿನ ಡಾ| ಅಂಬೇಡ್ಕರ್ ಯುವಕ - ಯುವತಿ ಸಂಘದವರಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|ಬಿ.ಆರ್. ಅಂಬೇಡ್ಕರ್ ಅವರ 57ನೇ ಪುಣ್ಯ ಸ್ಮರಣೆ ಲಾವಣ್ಯ ರಂಗಮನೆಯಲ್ಲಿ ಆಚರಿಸಲಾಯಿತು.  
    ರಂಗಕರ್ಮಿ ಬಿ. ಗಣೇಶ ಕಾರಂತ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ತನ್ನ ಜೀವನವನ್ನೇ ಸವೆದ ಧೀಮಂತ ಶಕ್ತಿಯಾದ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಮುನ್ನೆಡೆಯಬೇಕಾಗಿದೆ. ಶೋಷಿತ ವರ್ಗದವರನ್ನಲ್ಲದೇ ಜನಗಣತಿಗೆ ಅನುಗುಣವಾಗಿ ಮೀಸಲಾತಿಯ ವ್ಯವಸ್ಥೆ ಮಾಡಿದ ದೇಶದ ಸಂವಿಧಾನವನ್ನು ರಚಿಸಿದ ನಾಯಕನಿಗೆ ಶೃದ್ಧಾಂಜಲಿ ಸಲ್ಲಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂದ ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಮಾಡಿದ ಬಹಳಷ್ಟು ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
  ಡಾ| ಅಂಬೇಡ್ಕರ್ ಯುವಕ-ಯುವತಿ ಸಂಘದ ಗೌರವಾಧ್ಯಕ್ಷ ಮತ್ತು ಸಲಹೆಗಾರ ಸುರೇಶ ಕುಮಾರ್ ಸಂದರ್ಭಯೋಚಿತವಾಗಿ ಮಾತನಾಡಿದರು. ಯುವಕ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ಯುವತಿ ಸಂಘದ ಅಧ್ಯೆಕ್ಷೆ ಆಶಾ ಯಡ್ತರೆ, ಕಾರ್ಯದರ್ಶಿ ಚೈತ್ರಾ ಉಪಸ್ಥಿತರಿದ್ದರು. ಕಾರ್ಯದರ್ಶಿ ದಯಾನಂದ ಪಿ. ಸ್ವಾಗತಿಸಿ ವಂದಿಸಿದರು. ಬೆಳಿಗ್ಗೆ ಆಶ್ರಮ ಶಾಲೆ ಮಕ್ಕಳಿಗೆ ಮತ್ತು ಸರಕಾರಿ ಆಸ್ಪತ್ರೆಯ ಒಳ-ಹೊರ ರೋಗಿಗಳಿಗೆ ಸಂಘದ ವತಿಯಿಂದ ಹಣ್ಣು ಹಂಪಲನ್ನು ವಿತರಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com