ಸಿಗರೇಟ್‌ ಲಾಬಿಗೆ ಸರಕಾರದಿಂದ ಅಡಿಕೆ ಬೆಳೆ ನಿಷೇಧ: ಸಂಸದ ರಾಘವೇಂದ್ರ

ಬೈಂದೂರು: ಸಿಗರೇಟ್‌ ಲಾಬಿಗೆ ಮಣಿದ ಕೇಂದ್ರದ ಯುಪಿಎ ಸರಕಾರ ಅಡಕೆ ಬೆಳೆ ಹಾನಿಕಾರಕ ಎಂದು ಹೇಳುವ ಮೂಲಕ ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಈಡು ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಬೈಂದೂರಿನ ರೈಲ್ವೇ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಡಿಕೆ ಬೆಳೆ ಹಾನಿಕಾರಕ ಎಂದು ವರದಿ ನೀಡಿರುವುದು ದೊಡ್ಡ ದುರಂತ. ಈ ಭಾಗದ ಕೇಂದ್ರ ಸಚಿವರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಅಡಿಕೆಯನ್ನು ಹಾನಿಕಾರಕ‌ ಎಂದು ಹೇಳಿರುವ ವರದಿ ಹಿಂದೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕೊಲ್ಲೂರು ಕ್ಷೇತ್ರಕ್ಕೆ ದೇಶದ ವಿವಿಧಡೆಗಳಿಂದ ಸಹಸ್ರಾರು ಮಂದಿ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಅವರು ಹೆಚ್ಚಾಗಿ ರೈಲು ಮಾರ್ಗವನ್ನೇ ನೆಚ್ಚಿಕೊಂಡಿದ್ದಾರೆ. ಅನೇಕ ವರ್ಷಗಳ ಹಿಂದಿನಿಂದಲೂ ಬೈದೂರಿನ ಮೂಕಾಂಬಿಕಾ ರೈಲ್ವೇ ನಿಲ್ದಾಣದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೂ ಕಳೆದ ಅವಧಿಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮಾತ್ರ ಸುಮಾರು ರೂ. 5 ಕೋಟಿ ಅನುದಾನ ಬಿಡುಗಡೆಮಾಡಿದೆ. ಅದರಲ್ಲಿ ಈಗಾಗಲೇ 2.6 ಕೋ. ರೂ. ಕಾಮಗಾರಿ ಮುಗಿದಿದೆ. ಬಾಕಿ ಹಣವನ್ನು ಇಂದಿನ ಕಾಂಗ್ರೆಸ್‌ ಸರಕಾರ ಬಿಡುಗಡೆ ಮಾಡಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೈಂದೂರು ಕೆಜೆಪಿ ಮುಖಂಡ ನವೀನಚಂದ್ರ ಉಪ್ಪುಂದ, ತಾ. ಪಂ. ಸದಸ್ಯರಾದ ಗೌರಿ ದೇವಾಡಿಗ, ಪ್ರಸನ್ನ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com