ಪ್ರತಿಭಾ ಕಾರಂಜಿಗೆ ಸಕಾಲ ಸ್ಪರ್ಧೆ ಸೇರ್ಪಡೆ

ಉಡುಪಿ: ಸಕಾಲ ಯೋಜನೆ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯಾದ್ಯಂತ ತಾಲೂಕು ಮಟ್ಟದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಚಿತ್ರಕಲೆ (ವೈಯಕ್ತಿಕ) ಹಾಗೂ ನಾಟಕ (ಸಾಮೂಹಿಕ) ಸ್ಪರ್ಧೆಗಳನ್ನು ಹೆಚ್ಚುವರಿಯಾಗಿ ಏರ್ಪಡಿಸಲು ಉದ್ದೇಶಿಸಲಾಗಿದೆ.

ಕ್ಲಸ್ಟರ್‌ ಹಂತದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಪ್ರತ್ಯೇಕವಾಗಿ ಸಕಾಲ ವಿಷಯದ ಚಿತ್ರವನ್ನು ಬಿಡಿಸಬೇಕು ಹಾಗೂ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವು ಪ್ರತ್ಯೇಕವಾಗಿ ಸಕಾಲ ಯೋಜನೆ ಕುರಿತಂತೆ ನಾಟಕವನ್ನು ಪ್ರದರ್ಶಿಸಬೇಕಾಗಿದೆ.

ಇದಕ್ಕಾಗಿ ಆಕರ್ಷಕ ನಗದು ಬಹುಮಾನವನ್ನು ನಿಗದಿ ಮಾಡಲಾಗಿದೆ (ಪ್ರಥಮ 2,000 ರೂ., ದ್ವೀತೀಯ 1,500 ರೂ. ಹಾಗೂ ತೃತೀಯ 1,000 ರೂ). ತಾಲೂಕು ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ/ತಂಡಕ್ಕೆ ಜಿಲ್ಲಾ ಹಂತದಲ್ಲಿ ಸ್ಪರ್ಧೆ ನಡೆಸಲಾಗುವುದು. ಈ ಕುರಿತು ಸೂಕ್ತ ತರಬೇತಿ ನೀಡಲು ಶಾಲಾ ಮುಖ್ಯಸ್ಥರಿಗೆ ಇಲಾಖೆ ಸೂಚಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com