ಕೊಸೆಸಾಂವ್ ಅಮ್ಮನವರ ಇಗರ್ಜಿಯಲ್ಲಿ ತೆರಾಲಿ ಸಂಭ್ರಮ

ಗಂಗೊಳ್ಳಿ: ಇಲ್ಲಿನ ಕೊಸೆಸಾಂವ್ ಅಮ್ಮನವರ ಇಗರ್ಜಿಯ ವಾರ್ಷಿಕ ಹಬ್ಬ(ತೆರಾಲಿ) ಸಂಭ್ರಮದಿಂದ ಜರುಗಿತು. ಹಬ್ಬದ ನಿಮಿತ್ತ ಕೊಸೆಸಾಂವ್ ಅಮ್ಮನವರ ವಿಗ್ರಹದ ಪುರಮೆರವಣಿಗೆ ನಡೆಯಿತು. 

ಬಳಿಕ ಜರುಗಿದ ಮಹಾಪೂಜೆಯಲ್ಲಿ ಬ್ರಹ್ಮಾವರ ಕಿರುಕುಟುಂಬ ಇಗರ್ಜಿಯ ಸಹಾಯಕ ಧರ್ಮಗುರು ಪ್ರಕಾಶ್ ಲೋಬೊ ಧಾರ್ಮಿಕ ವಿಧಿ ನೆರವೇರಿಸಿದರು. ಕುಂದಾಪುರ ವಲಯ ಮುಖ್ಯ ಧರ್ಮಗುರು ರೆ.ಫಾ.ಅನಿಲ್ ಡಿಸೋಜ, ಇಗರ್ಜಿಯ ಧರ್ಮಗುರು ರೆ.ಫಾ.ಅಲ್ಪೋನ್ಸ್ ಡಿಲೀಮಾ, ಬಸ್ರೂರು ಇಗರ್ಜಿಯ ಧರ್ಮಗುರು ವಿಶಾಲ್ ಲೋಬೊ, ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಹಾಯಕ ಧರ್ಮಗುರು ಪ್ರವೀಣ್ ಅಮತ್ ಮಾರ್ಟಿಸ್, ಹಂಗಳೂರು ಪಿಯುಸ್ ನಗರ ಇಗರ್ಜಿಯ ಧರ್ಮಗುರು ಜಾನ್ ವಾಲ್ಟರ್ ಮೆಂಡೋನ್ಸ್, ಇಗರ್ಜಿಯ ಆಡಳಿತ ಮಂಡಳಿ ಉಪಾಧ್ಯಕ್ಷ ವಿನೋದ್ ಗಂಗೊಳ್ಳಿ ಉಪಸ್ಥಿತರಿದ್ದರು. 

ಮರುದಿನ ಬೆಳಗ್ಗೆ ವಿಶೇಷ ಪ್ರಾರ್ಥನಾ ವಿಧಿ ನಡೆಯಿತು. ಕಥೊಲಿಕ್ ಬಾಂಧವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉತ್ಸವದಲ್ಲಿ ಸರ್ವಧರ್ಮೀಯರು ಕೊಸೆಸಾಂವ್ ಅಮ್ಮನವರ ಹರಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com