ಕರ್ಮದಲ್ಲಿ ನಿಷ್ಠೆ ಮತ್ತು ಶ್ರದ್ಧೆ ಮುಖ್ಯ

ಕುಂದಾಪುರ: ಯಾವುದೇ ವ್ಯವಹಾರ ಹಾಗೂ ಉದ್ಯೋಗದಲ್ಲಿ ಯಶಸ್ಸು ದೊರೆಯಬೇಕಾದರೆ ವ್ಯವಹಾರಿಕ ಜ್ಞಾನ, ಕರ್ಮದಲ್ಲಿ ನಿಷ್ಠೆ ಹಾಗೂ ಶ್ರದ್ಧೆ ಮುಖ್ಯ. ಧರ್ಮಾಚರಣೆಯೊಂದಿಗೆ ನಮ್ಮ ಆಚಾರ ವಿಚಾರಗಳಲ್ಲಿ ನಂಬಿಕೆಯನ್ನಿಟ್ಟು, ಗುರು ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ. ಎಂದು ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
  ಅವರು ಗಂಗೊಳ್ಳಿ ಟೌನ್‌ ಸೌಹಾರ್ದ ಸಹಕಾರಿಯ ಕಛೇರಿಯಲ್ಲಿ ಸಹಕಾರಿಯ ನೂತನ ವೆಬ್‌ಸೆ„ಟ್‌ ಉದ್ಘಾಟಿಸಿ ಆಶೀರ್ವಚನ ನೀಡಿದರು.
   ಸಹಕಾರಿಯ ನಿರ್ದೇಶಕರಾದ ಬಿ.ಮಂಜುನಾಥ ಶೆಣೆ„, ಕೆ.ಗೋಪಾಲಕೃಷ್ಣ ನಾಯಕ್‌, ಉದಯಶಂಕರ ರಾವ್‌, ಬಿ.ರಾಘವೇಂದ್ರ ಪೈ, ಜಿ.ವಿಶ್ವನಾಥ ಆಚಾರ್ಯ, ಬಿ.ಪ್ರಕಾಶ ಶೆಣೆ„, ವೆಂಕಟೇಶ ನಾಯಕ್‌, ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್‌, ಸಹಕಾರಿಯ ಸಿಬ್ಬಂದಿಗಳು, ಸಹಕಾರಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
 ಅಧ್ಯಕ್ಷ ಎಚ್‌.ಗಣೇಶ ಕಾಮತ್‌ ಸ್ವಾಗತಿಸಿ, ಉಪಾಧ್ಯಕ್ಷ ಜಿ.ವೇದವ್ಯಾಸ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com