ಹಾಲಾಡಿ ಮೇಳ: ಪ್ರಥಮ ದೇವರ ಸೇವೆ

ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ಇದರ 11ನೇ ವರ್ಷದ ತಿರುಗಾಟವು ಡಿ. 4ರಂದು ಆರಂಭಗೊಳ್ಳಲಿದೆ.

ಪ್ರಥಮ ದೇವರ ಸೇವೆ ಆಟದ ಪ್ರಯುಕ್ತ ಗಣಹೋಮ ಹಾಗೂ ಮಾರಿಕಾನು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬೆಳಗ್ಗೆ 9ಕ್ಕೆ ಶ್ರೀ ಗಣಪತಿ ಪೂಜೆ ನಡೆಯಲಿದ್ದು, ರಾತ್ರಿ 10ಕ್ಕೆ 'ರಂಗಸ್ಥಳಕ್ಕೆ ನಿಲ್ಲುವುದು' ಕಾರ್ಯಕ್ರಮ ಜರಗಲಿದೆ.

ಈ ವರ್ಷದ ನೂತನ ಕಲಾಕುಸುಮಗಳಾದ ದೇವದಾಸ್‌ ಈಶ್ವರ ಮಂಗಲ ವಿರಚಿತ 'ರಣರಂಗ', ಹಂದಿಗದ್ದೆ ಸುರೇಶ್‌ ಕುಲಾಲ್‌ ವಿರಚಿತ ''ನಾಗಮಂಟಪ', ಬಸವರಾಜ್‌ ಶೆಟ್ಟಿಗಾರ್‌ ವಿರಚಿತ 'ಸಾಲಿಕೇರಿ ಕ್ಷೇತ್ರ ಮಹಾತ್ಮೆ ' ಹಾಗೂ ಪ್ರೇಕ್ಷಕರು ಬಯಸುವ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲಾಗುವುದು ಎಂದು ಮೇಳದ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com