ಹೆಮ್ಮಾಡಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

ಹೆಮ್ಮಾಡಿ:  ಸಂಗೀತವು ಮನುಷ್ಯನ ಮನೋರಂಜನೆಗೆ ಮಾತ್ರವಲ್ಲದೇ ಮಾನಸಿಕ ವಿಕಸನಕ್ಕೂ ಅತ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠವಾದ ವಿಷಯವಾಗಿದೆ. ಸಂಗೀತ ಪ್ರತಿಭೆಗೆ ಕಲ್ಲುಮನಸ್ಸನ್ನೂ ಮೃದುವಾಗಿಸುವ ಶಕ್ತಿಯಿದೆ. ಸಂಗೀತ ಗಾಯನ ಕಲಾವಿದರನ್ನು ಉತ್ತೇಜಿಸುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದಿಂದ ಸಮಾಜದ ಅನೇಕ ಸುಪ್ತಪ್ರತಿಭೆಗಳು ಬೆಳಗಲು ಅವಕಾಶವಾಗುತ್ತದೆ. ಮರೆಯಲ್ಲಿರುವ ಪ್ರತಿಭೆಗಳಿಗೂ ಬೆಳವಣಿಗೆಯ ಹೊಸಹಾದಿಯನ್ನು ತೆರೆಯಲು ಇದರಿಂದ ಸಾಧ್ಯ ಎಂದು ಸಂಗೀತಗುರು ಮಂಗೇಶ್ ಶೆಣೈ, ಯಳಜಿತ ಅವರು ಹೇಳಿದರು.
     ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ಗುರುವಾರ ಜರಗಿದ ವಿಶೇಷ ಘಟಕ ಯೋಜನೆ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯಶಿಕ್ಷಕ ನಂದಿ ದೇವಾಡಿಗ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಉದಯೋನ್ಮುಖ ಯುವ ಗಾಯಕರಿಂದ ಕಾರ್ಯಕ್ರಮವನ್ನು ಏರ್ಪಡಿಸಿದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಅರಳಲು ಸಹಕಾರಿಯಾಗುತ್ತದೆ ಎಂದರು.
   ಮುಖ್ಯ ಅತಿಥಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ. ಸೀತಾರಾಮ ಮಧ್ಯಸ್ಥ, ಹೆಮ್ಮಾಡಿ ಸಮೂಹ ಸಂಪನ್ಮೂಲ ವ್ಯಕ್ತಿ ಸಿ. ಎನ್. ಬಿಲ್ಲವ, ಬಾರಂದಾಡಿ ಶಾಲಾ ಸಹಶಿಕ್ಷಕ ಕೇಶವ ಶ್ಯಾನುಭಾಗ್ ಮೊದಲಾದವರು ಉಪಸ್ಥಿತರಿದ್ದರು.
   ಆಕಾಶವಾಣಿ ಕಲಾವಿದ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ ಹಾಗೂ ಕನ್ನಡ ಗೀತೆಗಳ ಗಾಯನವನ್ನು ಪ್ರಸ್ತುತಪಡಿಸಿದರು. ಯುವಗಾಯಕ ರವಿಕುಮಾರ್ ಹೆಮ್ಮಾಡಿ ಮತ್ತು ಯಳಜಿತ ಗ್ರಾಮದ ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ವಿದ್ಯಾರ್ಥಿಗಳಾದ ಸ್ವಾತಿ, ಪುಷ್ಪಲತಾ, ದಿವ್ಯ, ವಿಜೇತ ಮತ್ತು ಪ್ರತೀಕ್ಷಾ ಸಹಗಾಯಕರಾಗಿ ಭಾಗವಹಿಸಿದರು. ಪಕ್ಕವಾದ್ಯದಲ್ಲಿ ಕೇಶವ ಶ್ಯಾನುಭಾಗ್ ಅವರು ತಬ್ಲಾದಲ್ಲಿ, ಶಾಂತಿ ಕಬ್ಸೆ ಅವರು ಕೀಬೋರ್ಡ್‍ನಲ್ಲಿ ಹಾಗೂ ಹಾರ್ಮೋನಿಯಂನಲ್ಲಿ ಪವಿತ್ರಾ ಸಹಕರಿಸಿದರು.
   ಚಂದ್ರ ಕೆ. ಹೆಮ್ಮಾಡಿ ಅವರು ಸ್ವಾಗತಿಸಿದರು. ಸಹಶಿಕ್ಷಕ ಜಗದೀಶ್ ಶೆಟ್ಟಿ ಆವರು ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕ ಮೋಹನದಾಸ್ ಶೆಟ್ಟಿ ಅವರು ವಂದಿಸಿದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com