ಮಗು ಬಲಿ: ಅಂಗನವಾಡಿ ಸ್ಥಳಾಂತರಕ್ಕೆ ನಿರ್ಧಾರ

ಹೆಮ್ಮಾಡಿ : ಪುಟ್ಟ ಬಾಲಕ ಧನುಷ್ (4) ಲಾರಿಯಡಿಗೆ ಬಿದ್ದು ಮೃತಪಟ್ಟ ಘಟನೆಯಿಂದ ಆಕ್ರೋಶಿತರಾದ ಗ್ರಾಮಸ್ಥರು ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಬಳಿಕ ಶಿಶು ಅಭಿವೃದ್ಧಿ ಇಲಾಖೆ ಹೆಮ್ಮಾಡಿ ಸಮೀಪದ ಜಾಲಾಡಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ನಿರ್ಧರಿಸಿದೆ. 

1985ರಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರಕ್ಕೆ ಗಟ್ಟಿಯಾದ ಬಾಗಿಲು, ಶೌಚಾಲಯ, ತಡೆಬೇಲಿ ಇಲ್ಲ. ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಅಂಗನವಾಡಿ ಕಾರ್ಯಕರ್ತೆ ಇಲ್ಲವೇ ಸಹಾಯಕಿ ಸ್ವಲ್ಪ ಎಚ್ಚರಿಕೆ ವಹಿಸಿದ್ದರೂ ಪ್ರಾಣ ಉಳಿಸಬಹುದಿತ್ತು ಎಂದು ಹೇಳಿದರು. 

ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ತ್ರಾಸಿ ಸುಧಾಕರ ಆಚಾರ್ಯ, ಹೆಮ್ಮಾಡಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಮತ್ತಿತರರು ಅಂಗನವಾಡಿ ಸ್ಥಳಾಂತರಕ್ಕೆ ಒತ್ತಾಯಿಸಿದರು. ಜಿ.ಪಂ. ಮಾಜಿ ಸದಸ್ಯ ರಾಜು ದೇವಾಡಿಗ, ಗ್ರಾ.ಪಂ. ಸದಸ್ಯ ಚಂದ್ರ ನಾಯ್ಕ, ಚಂದ್ರಶೇಖರ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಮಸ್ಥರು ಸೂಚಿಸಿದ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗುವುದು, ಅವಕಾಶವಿದ್ದರೆ ಮಗುವಿನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಶಿಶು ಅಭಿವದ್ಧಿ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಶೇಷಪ್ಪ ಭರವಸೆ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com