ಕೊಲ್ಲೂರಿನಲ್ಲಿ ಚಿತ್ರನಟ ದರ್ಶನ್‌

ಕೊಲ್ಲೂರು: ಕನ್ನಡ ಚಲನಚಿತ್ರ ರಂಗದ ಖ್ಯಾತ ಯುವನಟ ದರ್ಶನ್‌ ಅವರು ಸಕುಟುಂಬಿಕರಾಗಿ ಮಂಗಳವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
   36ರ ಹರೆಯದ ದರ್ಶನ್‌ ಯಾವುದೇ ಸದ್ದುಗದ್ದಲವಿಲ್ಲದೆ  ಸಂಜೆ ದೇವಾಲಯಕ್ಕೆ ಆಗಮಿಸಿದ್ದರು. 58 ಚಿತ್ರಗಳಲ್ಲಿ ನಟಿಸಿರುವ ಅವರು ಕನ್ನಡ ಚಿತ್ರರಂಗದ 'ಚಾಲೆಂಜಿಂಗ್‌ ಸ್ಟಾರ್‌' ಆಗಿ ಮಿಂಚುತ್ತಿದ್ದು ಯುವಕ ಯುವತಿಯರ ಆರಾಧ್ಯ ಯುವ ನಟನಾಗಿ ಚಿತ್ರ ಪ್ರೇಮಿಗಳ ಮನಸೂರೆಗೊಂಡಿದ್ದಾರೆ. ಯಾವುದೇ ಪಾತ್ರವನ್ನು ಅನಾಯಾಸವಾಗಿ ನಿರ್ವಹಿಸುವ ಅವರು, 'ನಾನು ತಂದೆ ಖ್ಯಾತ ನಟರಾಗಿದ್ದ ದಿ| ತೂಗುದೀಪ ಶ್ರೀನಿವಾಸ ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ' ಎಂದು ಹೇಳುತ್ತಾರೆ.

ದರ್ಶನ್‌ ಹಾಗೂ ನಟಿ ನಿಖೀತಾ ನಡುವಿನ ಸಂಬಂಧದ ಬಗ್ಗೆ ಚಿತ್ರರಂಗದಲ್ಲಿ ಗುಲ್ಲೆಬ್ಬಿಸಿದ ಘಟನೆಯ ಅನಂತರ ಮತ್ತೆ ಕುಟುಂಬದವರೊಡನೆ ಸಹಬಾಳ್ವೆ ನಡೆಸುತ್ತಿರುವ ದರ್ಶನ್‌ ಇತ್ತೀಚೆಗೆ ತೆರೆಕಂಡ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ತನ್ನ ಅದ್ಭುತ ನಟನೆಗೆ 'ಫಿಲ್ಮ್ಫೇರ್‌' ಪ್ರಶಸ್ತಿಯೊಡನೆ ಅನೇಕ ಪ್ರಶಸ್ತಿಗಳ ಸರಮಾಲೆ ಹೊಂದಿದ್ದಾರೆ.

ಮಹಾಭಾರತ, ದೇವರ ಮಗ, ಭೂತಯ್ಯನ ಮಕ್ಕಳು, ಅಗ್ರಜ, ವಿರಾಟ್‌, ಸಾರಥಿ ಮುಂತಾದ ಚಿತ್ರಗಳ‌ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿದ ಅವರು ಖಾಸಗಿ ಜೀವನದಲ್ಲಿ ಬಹುಮುಖ ಪ್ರತಿಭಾವಂತರಾಗಿದ್ದಾರೆ. ಮೈಸೂರಿನಲ್ಲಿ ವನ್ಯಜೀವಿ ಸಂಗ್ರಹಾಲಯವನ್ನು ಆರಂಭಿಸಿ ಆ ಮೂಲಕ ಮೂಕಪ್ರಾಣಿಗಳಿಗೆ ಆಸರೆಯಾಗಿದ್ದಾರೆ.

ವೈವಿಧ್ಯಮಯ ಪಾತ್ರಗಳನ್ನು ವಿಭಿನ್ನ ಹಾವಭಾವಗಳ ಮೂಲಕ ಚಿತ್ರ ಪ್ರೇಮಿಗಳ ಕನಸಿನ ರಾಜನಾಗಿ ಯುವತಿಯರ ಪಾಲಿಗೆ ಪ್ರೀತಿಯ 'ದಶುì' ಆಗಿ ಸಿನೆಮಾ ರಂಗದಲ್ಲಿ ನಂಬರ್‌ 1 ನಟರಾಗಿ ಮಿಂಚುತ್ತಿದ್ದಾರೆ. ಶ್ರೀದೇವಿಯ ಆಶೀರ್ವಾದದಿಂದ ಸಿನೆಮಾ ರಂಗದಲ್ಲಿ ಕಿಂಚಿತ್‌ ಸಾಧನೆ ಮಾಡಿರುವುದಾಗಿ ಅವರು ಹೇಳಿರುತ್ತಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯ ನಿರ್ವಹಣಾಧಿಧಿಕಾರಿ ಎಲ್‌.ಎಸ್‌. ಮಾರುತಿ, ಉಪ ನಿರ್ವಹಣಾಧಿಧಿಧಿಕಾರಿ ಕೃಷ್ಣಮೂರ್ತಿ ಅವರು ದರ್ಶನ್‌ - ಪತ್ನಿ ವಿಜಯಲಕ್ಷ್ಮೀ ದಂಪತಿಯನ್ನು ಸಮ್ಮಾನಿಸಿ ಗೌರವಿಸಿದರು.
ವರದಿ ಕೃಪೆ: ಡಾ| ಸುಧಾಕರ ನಂಬಿಯಾರ್‌
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com