ಕಡಲ ಕಿನಾರೆಯಲ್ಲಿ ಮುಗಿಲೆತ್ತರಕ್ಕೇರಿದ ಬಾನ ಹಕ್ಕಿಗಳು

ಕುಂದಾಪುರ: ಕಳೆದ ವರ್ಷಗಳಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡು ಹೆಗ್ಗಳಿಕೆಗೆ ಪಾತ್ರವಾದ ಗುರುಕುಲ ಪಬ್ಲಿಕ್‌ ಸ್ಕೂಲ್‌ ನೇತೃತ್ವದಲ್ಲಿ ದ್ವಿತೀಯ ಬಾರಿಗೆ ರವಿವಾರ ಕೋಟೇಶ್ವರ ಕಡಲ ಕಿನಾರೆಯಲ್ಲಿ ವಿದ್ಯಾರ್ಥಿಗಳಿಗೆ 'ಗಾಳಿಪಟ ಸ್ಪರ್ಧೆ' ಹಾಗೂ ಪ್ರದರ್ಶನದ 'ಗಾಳಿಪಟ ಉತ್ಸವ' ವಿಶಿಷ್ಟವಾಗಿ ನಡೆಯಿತು.

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಈ ಗಾಳಿಪಟ ಉತ್ಸವ ಉದ್ಘಾಟಿಸಿ ಮಾತನಾಡಿ, ಗಾಳಿಪಟ ಶಾಂತಿಯ ಸಂಕೇತ. ಆಧುನೀಕತೆಯ ಜೀವನದಲ್ಲಿ ಹೆಚ್ಚು ಟಿ.ವಿ. ಮುಂದೆ ಮುಳುಗಿ ಹೋಗಿರುವ ಜನರಿಗೆ ಇಂತಹ ಉತ್ಸವಗಳಿಂದ ಒಂದೆಡೆ ಕೂಡುವಂತಾಗುತ್ತದೆ. ಇಂತಹ ಉತ್ಸವಗಳು ನಿರಂತರ ನಡೆಯಲಿ ಎಂದು ಹಾರೈಸಿ, ಹಾಡು ಹೇಳಿ ರಂಜಿಸಿದರು.

ಅತಿಥಿಗಳಾಗಿ ಬಾಂಡ್ಯ ಎಜ್ಯುಕೇಶನ್‌ ಟ್ರಸ್ಟ್‌ ಚೆಯರ್‌ವೆುನ್‌ ಬಿ. ಅಪ್ಪಣ್ಣ ಹೆಗ್ಡೆ, ಕುಂದಾಪುರ ಡಿವೈಎಸ್‌ಪಿ ಸಿ.ಬಿ. ಪಾಟೇಲ್‌, ಕುಂದಾಪುರ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಬಿ.ಎಂ. ಸುಕುಮಾರ್‌ ಶೆಟ್ಟಿ, ಬಾಂಡ್ಯ ಎಜ್ಯುಕೇಶನ್‌ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಜಂಟಿ ಆಡಳಿತ ನಿರ್ದೇಶಕಿ ಅನುಪಮಾ ಎಸ್‌. ಶೆಟ್ಟಿ, ಬಾಂಡ್ಯ ಎಜ್ಯುಕೇಶನ್‌ ಟ್ರಸ್ಟ್‌ನ ಆಡಳಿತಾಧಿಕಾರಿ ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಈ ಗಾಳಿಪಟ ಉತ್ಸವದಲ್ಲಿ ಅಂತಾರಾಷ್ಟ್ರೀಯ ದಾಖಲೆ ಖ್ಯಾತಿಯ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನ ತಂಡವಾದ ಮಂಗಳೂರಿನ 'ಟೀಂ ಮಂಗಳೂರು' ಅವರಿಂದ ಆಕರ್ಷಕ ಗಾಳಿಪಟ ಪ್ರದರ್ಶನ ಮತ್ತು ಹಾರಾಟ ನಡೆಯಿತು. ಇದೇ ಸಂದರ್ಭ ಗುರುಕುಲ ವಿದ್ಯಾರ್ಥಿಗಳಿಂದ ಮರಳುಶಿಲ್ಪ ಪ್ರದರ್ಶನ ನಡೆಯಿತು. ಜಿಲ್ಲಾದ್ಯಂತ ಆಗಮಿಸಿದ ಸಹಸ್ರಾರು ಮಂದಿ ಈ ಉತ್ಸವದಲ್ಲಿ ಪಾಲ್ಗೊಂಡರು.

ಮುಖ್ಯೋಪಾಧ್ಯಾಯಿನಿ ರೂಪಾ ಶೆಣೈ ಸ್ವಾಗತಿಸಿದರು. ಶಿವ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com