ಆನೆಗುಡ್ಡೆ : ಬ್ರಹ್ಮ ರಥೋತ್ಸವ ಸಂಪನ್ನ

ಕುಂಭಾಸಿ : ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿಯಾಗ ವಿಜಯ ನಾಮ ಸಂವತ್ಸರ ಮಾರ್ಗಶಿರ ಶುದ್ಧ ಚತುರ್ಥಿ ಡಿ.6 ಶುಕ್ರವಾರದಂದು ಸಂಭ್ರಮದಿಂದ ನಡೆಯಿತು ಈ ಸಂದರ್ಭದಲ್ಲಿ ಶ್ರೀ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕರಿಸಲಾಗಿದ್ದು ದೀಪಾಲಂಕಾರಗಳು ಎಲ್ಲರ ಗಮನ ಸೆಳೆಯಿತು.

ವಿಶೇಷ ಕೇಸರಿ ಪಾನಕ ವಿತರಣೆ : ದೂರದಿಂದ ಬರುವ ಭಕ್ತರ ದಣಿವು ನೀಗಿಸುವ ನಿಟ್ಟಿನಿಂದ ಕಳೆದ ಐವತ್ತು ವರ್ಷಗಳಿಂದಲೂ ಶಿವಮೊಗ್ಗದ ದಿ| ಅಡ್ಡೆ ನಾರಾಯಣ ಭಟ್‌ ಮತ್ತು ಮಕ್ಕಳು ಪ್ರಸ್ತುತ ಸುಮಾರು ಎರಡು ಕ್ವಿಂಟಾಲ್‌ಗ‌ೂ ಅಧಿಕ ಸಕ್ಕರೆಯ ಕೇಸರಿ ಪಾನಕವನ್ನು ವಿತರಿಸುತ್ತಿದ್ದರೂ ಎಂದು ಹೇಳಲಾಗುತ್ತಿದೆ ಅಲ್ಲದೆ ಈ ಮೊದಲು 7 ಕ್ವಿಂಟಾಲ್‌ಗ‌ೂ ಅಧಿಕ ಸಕ್ಕರೆಯಿಂದ ಪಾನಕವನ್ನು ಪಾನಕ ಸಮಿತಿಯ ವತಿಯಿಂದ ವಿತರಿಸಲಾಗುತ್ತಿತ್ತು ಎನ್ನುವುದೇ ವಿಶೇಷ

ಹರಿದು ಬಂದ ಭಕ್ತ ಸಾಗರ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಕ್ಕೆ ಮುಂಜಾನೆಯಿಂದಲೂ ನಂಬಿದ ಸಾವಿರಾರು ಭಕ್ತರು ಶ್ರೀ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಶ್ರೀ ದೇವರ ಕೃಪೆಗೆ ಪಾತ್ರರಾದ್ದರು.

ಈ ಸಂದರ್ಭದಲ್ಲಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿಗಳು ಕೆ.ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೆ.ರಮಣ ಉಪಾಧ್ಯಾಯ, ಹಾಗು ಅನುವಂಶಿಕ ಪರ್ಯಾಯ ಅರ್ಚಕ ಕೆ.ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಸಹೋದರರು ಹಾಗೂ ಸಿಬಂದಿ ವರ್ಗದವರು ಹಾಜರಿದ್ದರು.
-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com