ಸಂಭ್ರಮದ ಕ್ರಿಸ್ಮಸ್ ಆಚರಣೆ

ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಕುಂದಾಪುರ ವಲಯ ಕೆಥೋಲಿಕ್ ಸಭಾದ ವತಿಯಿಂದ ಭಾನುವಾರ ಕ್ರಿಸ್ಮಸ್ ಬಾಂಧವ್ಯ ಸೌಹಾರ್ದ ಕೂಟವನ್ನು ಆಯೋಜಿಸಲಾಗಿತ್ತು. ಈ ಕೂಟದ ಅಧ್ಯಕ್ಷತೆವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ, ದೇವರು ಹಾಗೂ ಮನುಷ್ಯರ ನಡುವಿನ ಬಂಧನವನ್ನು ಬೆಸೆದಿರುವುದು ಪ್ರೀತಿಯ ಭಾಷೆ, ಆದ್ದರಿಂದ ಪ್ರೀತಿಯ ಭಾಷೆಯನ್ನು ಮೊದಲು ಕಲಿತು, ಅದನ್ನು ಎಲ್ಲರಿಗೂ ಕಲಿಸಲು ಕಂಕಣಬದ್ದರಾಗೋಣ ಎಂದು ಕರೆ ನೀಡಿದರು.
  ಕಾರ್ಯಕ್ರಮವನ್ನು ಕರ್ನಾಟಕ ದಕ್ಷಿಣ ಸಭಾ ಸಿಎಸ್‌ಐ ಸಭೆಯ ಬಿಷಪ್ ಟ್ರೈಟ್ ಡಾ.ಜೆ.ಎಸ್. ಸದಾನಂದ ಉದ್ಘಾಟಿಸಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ಎನ್. ನಾಯಕ್ ಮಾತನಾಡಿ ಕ್ರೈಸ್ತ ಸಮುದಾಯದ ಸಾಮಾಜಿಕ ಸೇವೆಗಳನ್ನು ಪ್ರಶಂಸಿದರು.
ಕೆಥೊಲಿಕ್ ಸಭಾ ಕೇಂದ್ರಿಯ ಸಮಿತಿ ಆದ್ಯಕ್ಷ ಎಲ್. ರೋಯ್ ಕಿರಣ್ ಕ್ರಾಸ್ತಾ, ಮುದೂರು ಗ್ರಾಮದ ಸೀರೊ ಮಲಬಾರ್ ಕೆಥೊಲಿಕ್ ಚರ್ಚಿನ ಧರ್ಮಗುರು ವಂ.ಸೆಬಾಸ್ಟಿನ್, ಕುಂದಾಪುರ ಸಿಎಸ್‌ಐ ಚರ್ಚಿನ ಯೇಸುದಾಸ್, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ. ಅನಿಲ್ ಡಿಸೋಜಾ, ಕೆಥೊಲಿಕ್ ಸಭಾ ವಲಯ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕಾರ್ಯದರ್ಶಿ ಶಾಂತಿ ಪಿರೇರಾ, ನಿಕಟ ಪೂರ್ವ ಅಧ್ಯಕ್ಷೆ ಪ್ರೆಸಿಲ್ಲಾ ಮಿನೇಜಸ್  ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com