ಕುಂದೇಶ್ವರದಲ್ಲಿ ಸಂಭ್ರಮದ ಲಕ್ಷ ದೀಪೋತ್ಸವ

ಕುಂದಾಪುರ: ನಗರದ ಅಧಿದೇವರಾದ ಶ್ರೀ ಕುಂದೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಮತ್ತು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆಯಿಂದ ದೇವಳದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಸಂಜೆ ಭಕ್ತರು  ಸಹಸ್ರ ಸಹಸ್ರ ಸಂಖ್ಯೆಯಲ್ಲಿ  ಆಗಮಿಸಿ  ದೇವರ  ದರ್ಶನ ಪಡೆದರು, ದೀಪ ಹಚ್ಚಿ ಭಕ್ತರು ಸಂಭ್ರಮಿಸಿದರು. 
  ದೇವಸ್ಥಾನದ ವಠಾರದಲ್ಲಿ ನಡೆದ ಭಜನಾ ಕಾರ್ಯಕ್ರಮ  ನೃತ್ಯ ರೂಪಕ ನಡೆಯಿತು. ನಂತರ ರಂಗಪೂಜೆ, ಮಹಾಮಂಗಳಾರತಿ, ಲಕ್ಷದೀಪೋತ್ಸವ ಬಳಿಕ ರಥೋತ್ಸವ ನಡೆಯಿತು. ಬೆಳಿಗ್ಗೆಯ ತನಕ ಕಟ್ಟೆ ನಡೆಯಿತು.
ರಥೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಡೊಳ್ಳು ಕೂಣಿತ, ಚಂಡೆ ವಾದನ,ಕೀಲು ಕುದುರೆಗಳು, ತಟ್ಟಿರಾಯ,ಕೊಂಬು ಕಹಳೆಗಳ, ಜಾನಪದ ಹಾಗೂ ಸಾಂಸ್ಕೃತಿಕ ವೈಭವದ ಪ್ರದರ್ಶನವಿತ್ತು.  ದೀಪೋತ್ಸವದ ಪ್ರಯುಕ್ತ  ಕುಂದಾಪುರ ಪೇಟೆಯು ವಿಧ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು.  ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ  ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮಗಳು ಮತ್ತು ಸುಡುಮದ್ದು ಪ್ರದರ್ಶನಗಳು ಜನರನ್ನು ರಂಜಿಸಿದವು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com