ಮೋದಿಯ ಬಿರುಗಾಳಿ ಕಾಂಗ್ರೆಸ್‌ನಲ್ಲಿ ನಡುಕ: ಶ್ರೀನಿವಾಸ ಪೂಜಾರಿ

ಕುಂದಾಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೆಂದ್ರ ಮೋದಿಯವರ ಜನಪ್ರಿಯತೆಯ ಬಿರುಗಾಳಿ ಬೀಸುತ್ತಿದ್ದು ಇದನ್ನು ಗಮನಿಸಿದ ಕಾಂಗ್ರಸ್‌ ಪಕ್ಷ¨ಲ್ಲಿ ನಡುಕ ಉಂಟಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕೋಣಿ ಸ್ಥಾನೀಯ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಮೋದಿ ಜನಪ್ರಿಯತೆಯನ್ನು ಬಳಸಿಕೊಂಡು ಮತಗಟ್ಟೆಯಲ್ಲಿ ಕಾರ್ಯಕರ್ತರ ಜೋಡಣೆ, ಸಂಪರ್ಕದ ಅಭಿಯಾನ ಪ್ರಾರಂಭಿಸಿ ಮತದಾರರ ಮನೆಮನೆಗೆ ತೆರಳಿ ಬಿ.ಜೆ.ಪಿ ಗೆಲ್ಲುವಲ್ಲಿ ಮತ್ತು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವಲ್ಲಿ ತಳ ಮಟ್ಟದ ಕೆಲಸ ಆರಂಭಿಸಬೇಕು ಎಂದರು.

ಒಂದೆಡೆ ದೇಶದ ಅಭದ್ರತೆಯ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ, ಮತ್ತೂಂದೆಡೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್‌ ಪಕ್ಷ ಸಂಪೂರ್ಣ ವಿಫಲವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಉಗ್ರಗಾಮಿಗಳಭೀತಿ ಸಾಮಾನ್ಯ ಜನರನ್ನು ಕಾಡುತ್ತಿದೆ. ಶಿರಾಡಿ ಘಾಟಿಯಿಂದ ಆರಂಭವಾಗಿ ಬೆ„ಂದೂರಿನವರೆಗೆ ರಾಷ್ಟ್ರೀಯ ಹೆದ್ದಾರಿಯು ಅಸ್ತವ್ಯಸ್ತವಾಗಿದೆ. ಈ ದುರ್ವವ್ಯವಸ್ಥೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಜನವರಿ 2ರಿಂದ 5ರ ವರೆಗೆ ಜನಾಂದೋಲನ ಪಾದಯಾತ್ರೆ ಜಲ್ಲಾ ಬಿ.ಜೆ.ಪಿ ಕೈಗೊಂಡಿದ್ದು ಈ ಪಾದಯಾತ್ರೆಯಲ್ಲಿ ಬಿ.ಜೆ.ಪಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಯುವಕರು ದೇಶ ರಕ್ಷಣೆ ಬಯಸುವ ಪ್ರತಿಯೊಬ್ಬ ನಾಗರಿಕರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷರಾದ ರಾಜೇಶ್‌ ಕಾವೇರಿ ವಹಿಸಿದರು.

ಈ ಸಭೆಯಲ್ಲಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್‌ ಕುಮಾರ್‌, ಬಸ್ರೂರು ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ ಬಸ್ರೂರು ಪ್ರಧಾನ ಕಾರ್ಯದರ್ಶಿ ಉಮೇಶ್‌ ಆಚಾರ್‌, ಕೋಣಿ ಸ್ಥಾನೀಯ ಸಮಿತಿ ಅಧ್ಯಕ್ಷ ಸುರೇಶ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಸತೀಶ ಶೇರೆಗಾರ, ಪಕ್ಷದ ಕಾರ್ಯಕರ್ತರಾದ ಸುಧಾಕರ ಪೂಜಾರಿ, ವಿಜಯ ಕೋಣಿ, ಸುಧಾಕರ ಭಂಡಾರಿ, ಕೋಣಿ ಗ್ರಾ.ಪಂ. ಉಪಾಧ್ಯಕ್ಷ ಸಂಜೀವ ಮೊಗವೀರ, ಸದಸ್ಯ ರಾಮ ಶೇರೆಗಾರ, ರಾಮಾಂಜನೀಯ ಯುವಕ ಮಂಡಲದ ಅಧ್ಯಕ್ಷ ಅಜಿತ್‌ ಕುಮಾರ್‌ ಶೆಟ್ಟಿ ಮತ್ತು ಎಸ್‌.ಸಿ.ಮೋರ್ಚಾ ಅಧ್ಯಕ್ಷ ಗೋಪಾಲ ಕಳಿಂಜೆ, ಜಿಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಮಹೇಶ ಪೂಜಾರಿ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಅಸೋಡು ಚಂದ್ರ ಪೂಜಾರಿ ಉಪಸ್ಥಿತರಿದ್ದರು. ಸುಧಾಕರ ಪೂಜಾರಿ ಸ್ವಾಗತಿಸಿದರು. ರತ್ನಾಕರ ಪೂಜಾರಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com