ಬಿಲ್ಲವ ಸಮಾಜ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಕುಂದಾಪುರ: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಾಲ್ಕನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 2014ನೇ ಮೇ 25ರಂದು ಕುಂದಾಪುರ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ, ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಹಾಗೂ ಕಾರ್ಯದರ್ಶಿ ಗಣೇಶ್‌ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿಚ್ಛಿಸುವ ವರನಿಗೆ ಧೋತಿ, ಶಾಲು, ಪೇಟ, ಹೂವಿನ ಮಾಲೆ ಹಾಗೂ ವಧುವಿಗೆ ಧಾರೆ ಸೀರೆ, ರವಕೆ ಕಣ, ಮಂಗಳಸೂತ್ರ, ಬಾಸಿಂಗ ಹಾಗೂ ಹೂವಿನ ಮಾಲೆ ನೀಡಲಾಗುತ್ತದೆ. ಅಲ್ಲದೇ ವಿವಾಹಕ್ಕೆ ಆಗಮಿಸುವರಿಗೆ ಭೋಜನದ ವ್ಯವಸ್ಥೆಯಿದೆ.

ವಿವಾಹಾಪೇಕ್ಷಿಗಳು 2014ರ ಮೇ 10ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಘದ ಕಚೇರಿ(08254-231755)ಯನ್ನು ಸಂಪರ್ಕಿಸಲು ಕೋರಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com