ಕುಂದಾಪುರದಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯಾಗಾರ

ಕುಂದಾಪುರ: ಕುಂದಾಪುರದಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ ಡಿ.25, 26 ಮತ್ತು 27ರಂದು ನಡೆಯಲಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷದ ಪೋಲಿಟ್‌ ಬ್ಯೂರೋ ಸದಸ್ಯರಾದ ಎಸ್‌.ಆರ್‌ ಪಿಳ್ಳೆ, ಕೆ.ವರದರಾಜನ್‌ ಮತ್ತು ಎಂ.ಎ ಬೇಬಿ ಈ ಮೂವರು ಭಾಗವಹಿಸಲಿದ್ದಾರೆ.

ಡಿ.27ರಂದು ಕುಂದಾಪುರ ನೆಹರು ಮೈದಾನದಲ್ಲಿ ಬƒಹತ್‌ ಸಾರ್ವಜನಿಕ ಸಭೆ ನಡೆಯಲಿದೆ . ಸಿಪಿಐ(ಎಂ) ಪಕ್ಷದ ಪೋಲಿಟ್‌ ಬ್ಯೂರೋ ಸದಸ್ಯ ಎಂ.ಎ ಬೇಬಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ರಾಜಕೀಯ ಪರಿಸ್ಥಿತಿ, ಸಿಪಿಐ(ಎಂ) ಪಕ್ಷದ ನಿಲುಮೆ ಹಾಗೂ ಎಡಪಕ್ಷಗಳ ಪರ್ಯಾಯ ಧೋರಣೆಗಳ ಕುರಿತು ವಿವರಣೆ ಮಾಡಲಿದ್ದಾರೆ.

ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ, ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ವಿ.ಜೆ.ಕೆ ನಾಯರ್‌, ಜಿ.ಎನ್‌ ನಾಗರಾಜ, ಕೆ.ಆರ್‌. ಶ್ರೀಯಾನ್‌, ಎಸ್‌. ಪ್ರಸನ್ನ ಕುಮಾರ್‌, ನಿತ್ಯಾನಂದ ಸ್ವಾಮಿ, ಯು. ಬಸವರಾಜು, ಎಸ್‌. ವರಲಕ್ಷಿ¾ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್‌ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com