ಸರಳ ಭಗವದ್ಗೀತೆಗೆ ಆಹ್ವಾನ

ಕುಂದಾಪುರ: ಎಲ್ಲ ವರ್ಗದ ಜನರಿಗೆ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ರಚಿತವಾದ ಭಗವದ್ಗೀತೆಯ ಹಸ್ತಪ್ರತಿಗಳನ್ನು ಲೇಖಕರಿಂದ ಆಹ್ವಾನಿಸಲಾಗಿದೆ. ಮೂಲ ಶ್ಲೋಕಗಳೊಂದಿಗೆ ಕನ್ನಡ ಭಾವಾರ್ಥಸಹಿತ ಇರಬೇಕು. ಈಗಾಗಲೆ ಮುದ್ರಿತವಾದ ಕೃತಿಗಳನ್ನು ಸಹ ಪರಿಶೀಲನೆಗೆ ಕಳುಹಿಸಬಹುದು. ಕುಂದಾಪುರದ ಪುಸ್ತಕನಿಧಿ ತನ್ನ ಪ್ರಕಟಣೆ ಚಟುವಟಿಕೆಯ ಮೂವತ್ತನೆ ವರ್ಷದ ನೆನಪಿನಲ್ಲಿ ಮನೆಮನೆಗೆ ಭಗವದ್ಗೀತೆಯನ್ನು ತಲಪಿಸುವ ಯೋಜನೆಯಲ್ಲಿ ಈ ಕೃತಿಗಳನ್ನು ಬಳಸಿಕೊಳ್ಳುತ್ತದೆ. ಲೇಖಕರು ತಮ್ಮ ಕೃತಿಗಳನ್ನು ಡಿಸೆಂಬರ್ 31ರೊಳಗೆ ಪುಸ್ತಕನಿಧಿ, ನಾಲಂದಾ, ಖಾರ್ವಿಕೇರಿ ರಸ್ತೆ, ಕುಂದಾಪುರ - 576201 (ಮೊಬೈಲ್: 9448869963) ಇಲ್ಲಿಗೆ ಕಳುಹಿಸಬಹುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com