ಡಿ.15:‘ವಿದ್ಯಾಧಾರೆ’ ಮಾಹಿತಿ ಕಾರ್ಯಾಗಾರ

ಕುಂದಾಪುರ: ದೇವಾಡಿಗರ ಸಮಾಜ ಸೇವಾ ಸಂಘ (ರಿ) ಕುಂದಾಪುರ, ದೇವಾಡಿಗರ ಸಂಘ(ರಿ) ಬೆಂಗಳೂರು ಹಾಗೂ ಕುಂದಾಪುರ ತಾಲೂಕು ಇತರ ದೇವಾಡಿಗ ಸಂಘಗಳ ಸಹಕಾರದೊಂದಿಗೆ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾಧಾರೆ ಕಾರ್ಯಕ್ರಮವು ಡಿಸೆಂಬರ್ 15 ರ ಭಾನುವಾರ ಬೆಳಿಗ್ಗೆ ಗಂಟೆ 9-00 ರಿಂದ ಸಂಜೆ ಗಂಟೆ 5-00 ರವರೆಗೆ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರ, ಸರಕಾರಿ ಪದವಿಪೂರ್ವ ಕಾಲೇಜು, ಕುಂದಾಪುರದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9-00 ರಿಂದ 9.30 ರವರೆಗೆ ನೋಂದಣಿ, 9-30 ರಿಂದ 1-00 ರವರೆಗೆ ತರಬೇತಿ ಕಾರ್ಯಕ್ರಮದ ಅಂಗವಾಗಿ “ವೃತ್ತಿ ಮಾರ್ಗದರ್ಶನ” ಮತ್ತು “ಪರೀಕ್ಷೆ ಎದುರಿಸುವ ಬಗೆ” ಕುರಿತು ಡಾ. ಉಮೇಶ್ ಪುತ್ರನ್, (ವೈದ್ಯಕೀಯ ನಿರ್ದೇಶಕರು, ಚಿನ್ಮಯಿ ಆಸ್ಪತ್ರೆ, ಕುಂದಾಪುರ) ಪ್ರಕಾಶ್ ನವಿಲೂರು, (ಪ್ರಾಂಶುಪಾಲರು, ಬಾಲಕಿಯರ ಸರಕಾರಿ ಪಿ. ಯು. ಕಾಲೇಜು, ನಂಜನಗೂಡು) ಮದ್ಯಾಹ್ನ ಗಂಟೆ 1-30 ರಿಂದ 5- 00 ರವರೆಗೆ “ಶಿಕ್ಷಣ ಮತ್ತು ಉದ್ಯೋಗ ಅವಕಾಶ ಮಾಹಿತಿ” ಕುರಿತು ಪ್ರಶಾಂತ ದೇವಾಡಿಗ, ಗಣೇಶ ಕುಂದಾಪುರ, ಪ್ರವೀಣ ಕುಮಾರ, ಗಣೇಶ ಆರ್ ಅವರು ಉಪನ್ಯಾಸ ನೀಡಲಿದ್ದಾರೆ. ದೇವಾಡಿಗ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯದಲ್ಲಿ ಭಾಗವಹಿಸುವಂತೆ ದೇವಾಡಿಗ ಸೇವಾ ಸಂಘ (ರಿ) ಕುಂದಾಪುರದ ಅಧ್ಯಕ್ಷ ಕೆ. ನಾರಾಯಣ ದೇವಾಡಿಗ ಹಾಗೂ ದೇವಾಡಿಗ ಸಂಘ(ರಿ) ಬೆಂಗಳೂರು ಅಧ್ಯಕ್ಷ ರಘು ಸೇರಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಹೆಚ್ಚಿನ ಮಾಹಿತಿಗಾಗಿ 9448548806, 7259018004, 9632274185 ಸಂಪರ್ಕಿಸಬಹುದು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com