ವಿಶ್ವ ಕೊಂಕಣಿ ಕೇಂದ್ರ ಜ. 4ರಿಂದ 12:ಪುಸ್ತಕ ಮೇಳ, ನಾಟಕೋತ್ಸ

ಮಂಗಳೂರು: ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ ಹೊಸದಿಲ್ಲಿಯ ನ್ಯಾಷನಲ್‌ಬುಕ್‌ ಟ್ರಸ್ಟ್‌, ಕೊಂಕಣಿ ಭಾಸ ಅನಿ ಸಂಸ್ಕೃತಿ ಪ್ರತಿಷ್ಠಾನ ವಿಶ್ವ ಕೊಂಕಣಿ ಕೇಂದ್ರ ಸಹಯೋಗದೊಂದಿಗೆ ಜ. 4ರಿಂದ 12ರ ವರೆಗೆ ರಾಷ್ಟ್ರ ಮಟ್ಟದ 'ಮಂಗಳೂರು ಪುಸ್ತಕ ಮೇಳ' ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಸುಮಾರು 200ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ 110ನೇ ಹುಟ್ಟು ಹಬ್ಬದ ನೆನಪಿನಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಮಹಿಳಾ ಸಶಕ್ತೀಕರಣದ 3 ದಿನಗಳ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಪ್ರಬಂಧ ಮಂಡನೆ, ಚರ್ಚಾಗೋಷ್ಠಿ, ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ ಲೇಖಕಿಯರ ಸಂಘ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಕರ್ನಾಟಕ ಕರಕುಶಲ ಮಂಡಳಿಯ ಲೇಖಕಿ ಸದಸ್ಯರು ಹಾಗೂ ಮಂಗಳೂರಿನ ಮಹಿಳಾ ಲೇಖಕಿಯರು ಪಾಲ್ಗೊಳ್ಳಲಿದ್ದಾರೆ.

ಕಮಲಾದೇವಿ ಚಟ್ಟೋಪಾಧ್ಯಾಯ ಕೊಂಕಣಿ ನಾಟಕ ಮಹೋತ್ಸವವು ಜ. 8ರಿಂದ 10ರ ವರೆಗೆ ಪ್ರತಿದಿನ ಸಂಜೆ 5.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com