ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನ

ಮಂಗಳೂರು: ವಿಶೇಷ ಘಟಕ ಯೋಜನೆ 2013 - 14ನೇ ಸಾಲಿನಲ್ಲಿ ಸಾಮಾಜಿಕ ಸಮಾನತೆ ಸಂದೇಶ ಸಾರುವ 'ಮನುಷ್ಯ ಜಾತಿ ತಾನೊಂದೆ ವಲಂ' ಧ್ವನಿಬೆಳಕು ಕಾರ್ಯಕ್ರಮವನ್ನು ಬೆಂಗಳೂರು ಹಾಗೂ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಏರ್ಪಡಿಸಲು ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯ ಕಲಾವಿದರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಕಲಾವಿದರು ತಮ್ಮ ಅರ್ಜಿಗಳನ್ನು 'ಜಿಲ್ಲಾ ವಾರ್ತಾಧಿಧಿಕಾರಿಗಳು, ವಾರ್ತಾ ಇಲಾಖೆ, ಲೋಕೋಪಯೋಗಿ ಇಲಾಖೆ ಕಟ್ಟಡ ಸಂಕೀರ್ಣ, 2ನೇ ಮಹಡಿ, ಮಂಗಳೂರು - 1' ಇಲ್ಲಿಗೆ ಕಳುಹಿಸಬಹುದು. ಅರ್ಜಿ ಸಲ್ಲಿಸಲು ಡಿ. 30 ಕೊನೆಯ ದಿನಾಂಕ ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com