ಒಕ್ಕೂಟಗಳ ಪದಗ್ರಹಣ

ಮುದೂರುಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ತಾಲೂಕಿನಲ್ಲಿ ಅತೀ ಹೆಚ್ಚು ಗೋಬರ್ ಅನಿಲ ಸ್ಥಾವರಗಳನ್ನು ನಿರ್ಮಾಣ ಮಾಡುವ ಮೂಲಕ ಮುದೂರು ಗ್ರಾಮದಲ್ಲಿ ಗಮನಾರ್ಹ ಸಾಧನೆಯಾಗಿದೆ. ಇದು ಮಾದರಿ ಕೆಲಸವಾಗಿದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ’ ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಇತ್ತೀಚೆಗೆ ಮುದೂರುವಿನಲ್ಲಿ ನಡೆದ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಚಿತ್ತೂರು ವಲಯದ ಮುದೂರು ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುದೂರು ಸೈಂಟ್ ಮೇರಿಸ್ ಚರ್ಚ್‍ನ ಧರ್ಮಗುರುಗಳಾದ ಫಾ|ವರ್ಗಿಸ್ ಪುದಿಯಡಪ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಗ್ರೇಸಿ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಧ.ಗ್ರಾ ಯೋಜನೆಯ ತಾ.ಯೋಜನಾಧಿಕಾರಿ ಹೇಮಲತಾ ಹೆಗ್ಡೆ ಮುದೂರು ಭಾಗದಲ್ಲಿ ಯೋಜನೆಯಿಂದಾದ ಸಾಧನೆ, ಗೋಬರ್ ಗ್ಯಾಸ್, ರಬ್ಬರ್ ಕೃಷಿಗೆ ಇಲ್ಲಿ ತಾಲೂಕಿನಲ್ಲಿಯೇ ಗರಿಷ್ಠ  ರೂ.4.63ಸಾವಿರ ಅನುದಾನ ಪಡೆದುಕೊಳ್ಳಲಾಗಿದೆ ಎಂದರು.
ಮೆಕ್ಕೆ ಒಕ್ಕೂಟದ ಅಧ್ಯಕ್ಷ ಮಹಾಬಲ ಪೂಜಾರಿಯವರು ನೂತನ ಅಧ್ಯಕ್ಷ ಸುರೇಶ ಅವರಿಗೂ, ದುಡ್ಡಿನಗುಳಿ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ಗುರುರಾಜ್ ಅವರಿಗೆ, ಮುದೂರು ಒಕ್ಕೂಟದ ಅಧ್ಯಕ್ಷ ಚಂದ್ರ ಅವರು ನೂತನ ಅಧ್ಯಕ್ಷ ರಾಜೇಶ ಅವರಿಗೆ ಅಧಿಕಾರ ಹಸ್ತಾಂತರಿಸಿದರು.  ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಜಿ.ಬೇಬಿ ಸ್ವಾಗತಿಸಿ, ಸೇವಾ ಪ್ರತಿನಿಧಿ ರಾಮು ವರದಿ ಮಂಡಿಸಿದರು. ಸೇವಾ ಪ್ರತಿನಿಧಿ ಉದಯ ವಂದಿಸಿದರು. ವಲಯ ಮೇಲ್ವಿಚಾರಕ ಮಹೇಶ್.ಆರ್ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com