ಮಹಿಳೆಯ ರಕ್ಷಣೆಗೆ ನಮೋ ಪವರ್‌ ಪೆಪ್ಪರ್‌ ಸ್ಪ್ರೆ

ಉಡುಪಿ: ಮಹಿಳೆಯರ ಮೇಲೆ ಅತ್ಯಾಚಾರ, ಬ್ಲೂಫಿಲ್ಮ್ ತಯಾರಿಕೆಗಳಂತಹ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಮುಂದಿನ ಪ್ರಧಾನಿ ಎಂದು ಬಿಂಬಿಸಲಾಗುತ್ತಿರುವ ನರೇಂದ್ರ ಮೋದಿ ಹೆಸರಿನಲ್ಲಿ ನಮೋ ಬ್ರಿಗೇಡ್‌ ಸಂಘಟನೆ 'ನಮೋ ಪವರ್‌ ಪೆಪ್ಪರ್‌ ಸ್ಪ್ರೆ'ಯನ್ನು ಹೊರತಂದಿದೆ.

ಇದೊಂದು ಸಿಂಪಡಿಕೆಯ ಸಾಧನ. ಯಾರಾದರೂ ಒಬ್ಬರೇ ಹೋಗುತ್ತಿರುವಾಗ ದುಷ್ಕರ್ಮಿಗಳು ಆಘಾತವೆಸಗಲು ಬಂದರೆ ಇದನ್ನು ಆತನ ಕಣ್ಣಿಗೆ ಸಿಂಪಡಿಸಿದರೆ ಸಾಕು. ಆತನ ಕಣ್ಣುಗಳ ಉರಿಯಿಂದ ಓಡಲೂ ಆಗದ ಸ್ಥಿತಿ ಬರುತ್ತದೆ. ಇದರ ಶಕ್ತಿ 30ರಿಂದ 45 ನಿಮಿಷ ಇರುತ್ತದೆ. ಅಷ್ಟರೊಳಗೆ ದುಷ್ಕರ್ಮಿಯನ್ನು ಹಿಡಿಯಬಹುದು, ಮಹಿಳೆ ಬಚಾವಾಗಲೂಬಹುದು. ಇದನ್ನು ಕೇವಲ ಅತ್ಯಾಚಾರವೆಸಗುವ ದುಷ್ಕರ್ಮಿಗಳಿಗೆ ಮಾತ್ರ ಉಪಯೋಗಿಸಬೇಕೆಂದಿಲ್ಲ. ಕುಡುಕರು, ಹುಚ್ಚರು ಮೈಮೇಲೆ ಎರಗಲು ಬಂದರೆ ಅವರ ಮೇಲೂ ಎರಚಬಹುದು.

ಇದೆಂಥ ಸ್ಪ್ರೆ? ಕಾಳುಮೆಣಸಿನ ಸಾರದಿಂದ ಮಾಡಿದ ದ್ರವ್ಯವಿದು. ಇದರ ಖಾರ ಸಾಮಾನ್ಯ ಅಡುಗೆಮನೆಯ ಮೆಣಸಿಗಿಂತ 20 ಪಟ್ಟು ಹೆಚ್ಚಿಗೆ ಇದೆಯಂತೆ. ಇದನ್ನು ಸಿಂಪಡಿಸಿದರೆ 5ರಿಂದ 7 ಅಡಿ ದೂರ ಹೋಗುತ್ತದೆ. 400ರಿಂದ 500 ರೂ.ವರೆಗೆ ಮಾರುಕಟ್ಟೆಯಲ್ಲಿ ಸಿಗಬಹುದಾದ ಈ ಉತ್ಪನ್ನವನ್ನು ಲಾಭಾಂಶ ಬಿಟ್ಟು 195 ರೂ.ಗೆ ಕೊಡಲಾಗುತ್ತದೆ.

ಈಗಾಗಲೇ 'ನಮೋ ಪವರ್‌ ಪೆಪ್ಪರ್‌ ಸ್ಪ್ರೆ' ಎಂಬ ಫೇಸ್‌ಬುಕ್‌ ತೆರೆಯಲಾಗಿದ್ದು 12,000 ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಟಪಾಡಿಯಲ್ಲಿ ಜ.6ರ ಸಂಜೆ 4 ಗಂಟೆಗೆ ನಡೆಯುವ ನಮೋ ಬ್ರಿಗೇಡ್‌ ಘಟಕದ ಉದ್ಘಾಟನಾ ಸಮಾರಂಭದಲ್ಲಿ 'ಊರ್ಜಾ' ಸ್ವಯಂಸೇವಾ ಸಂಸ್ಥೆ ಅಧ್ಯಕ್ಷೆ ಅಂಬಿಕಾ ನಾಯಕ್‌ ಬಿಡುಗಡೆಗೊಳಿಸುವರು. ಬಳಿಕ ಉಡುಪಿ ಬಸ್‌ ನಿಲ್ದಾಣ ಸಮೀಪವಿರುವ ನಮೋ ಬ್ರಿಗೇಡ್‌ ಕಚೇರಿ ಸೇರಿದಂತೆ ರಾಜ್ಯಾದ್ಯಂತ ಇದು ದೊರಕಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com