ಜನರಿಗೆ ಸಮುದಾಯದತ್ತ ಹೊಣೆ ಇದೆ: ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ

ನಾಡ : ಒಂದು ಸಮುದಾಯಕ್ಕೆ ಸೇರಿದ ಜನರು ತಮ್ಮ ಮೇಲ್ಮೆಗೆ ಅಗತ್ಯವಾಗಿರುವುದನ್ನು ಸಾಧಿಸಿಕೊಳ್ಳುವುದರ ಜೊತೆಗೆ ಸಮುದಾಯದತ್ತ ಸ್ಪಂದಿಸಬೇಕಾದ ಹೊಣೆಯನ್ನೂ ನಿರ್ವಹಿಸಬೇಕಾಗುತ್ತದೆ. ಅದಕ್ಕಾಗಿ ಮತ್ತು ಗುರುಸೇವೆಗಾಗಿ ಕಟ್ಟಿಕೊಳ್ಳುವ ಸಂಘಟನೆ ಸಮಾಜಮುಖೀಯೂ, ಗುರುಮುಖೀಯೂ ಆಗಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
     ನಾಡ ಗ್ರಾಮದ ಚುಂಗಿಗುಡ್ಡೆ ಪಟೇಲರ ಮನೆಯಲ್ಲಿ ನಡೆದ ಗುರುಭಿಕ್ಷಾ ಸೇವಾ ಕಾರ್ಯಕ್ರಮದಲ್ಲಿ ಆಶೀರ್ವಚನಗೆ„ದರು.
     ಇದೇ ಸಂದರ್ಭದಲ್ಲಿ ಹೊನ್ನಾವರ ಹವ್ಯಕ ಮಂಡಲದ ಅಧೀನದ ಮರವಂತೆ ಹವ್ಯಕ ವಲಯದ ರಚನೆಯನ್ನು ಘೋಷಿಸಲಾಯಿತು.
      ಎಂ. ರಾಜಶೇಖರ ಹೆಬ್ಟಾರ್‌ ಸ್ವಾಗತಿಸಿದರು. ಹೊನ್ನಾವರ ಮಂಡಲದ ಅಧ್ಯಕ್ಷ ಜಿ. ಜಿ. ಭಟ್ಟ ಪ್ರಸ್ತಾವನೆಗೆ„ದರು. ವಾಸುದೇವ ಹೆಬ್ಟಾರ್‌ ಮರವಂತೆ ಮಂಡಲದ ಅವಲೋಕನ ಮಾಡಿದರು. ಹವ್ಯಕ ಮಹಾ ಮಂಡಲದ ಕಾರ್ಯದರ್ಶಿ ಪ್ರಮೋದ ಪಂಡಿತ್‌ ಸಂಘಟನೆ ಮತ್ತು ವಿವಿಧ ವಿಭಾಗಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ವಲಯದ ನೂತನ ಅಧ್ಯಕ್ಷ‌ ಎಂ. ವಿನಾಯಕ ರಾವ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com