ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ ರಜತ ಮಹೋತ್ಸವ

ನಾಗೂರು: ಈ ಶಿಕ್ಷಣ ಸಂಸ್ಥೆ ಪ್ರಾಂರಂಭದ ದಿನಗಳಲ್ಲಿ ಹಲವಾರು ಏರಿಳಿತಗಳನ್ನು ಎದುರಾದರೂ ಉತ್ತಮ ಉದ್ದೇಶಗಳನ್ನಿಟ್ಟುಕೊಂಡು ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸಿನತ್ತ ಸಾಗಿ 25 ವರ್ಷಗಳನ್ನು ಪೂರೈಸಿದೆ ಎಂದು ಆರ್.ಕೆ.ಸಂಜೀವರಾವ್ ಶೈಕ್ಷಣಿಕ ಮತ್ತು ಸಾಂಸೃತಿಕ ಅಕಾಡೆಮಿ ಅಧ್ಯಕ್ಷ ಕೆ.ಎಸ್. ಪ್ರಕಾಶ್ ರಾವ್ ಹೇಳಿದರು. 
       ಅವರು ಖಂಬದಕೋಣೆ ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ ರಜತ ಮಹೋತ್ಸವ ಸ್ಮಾರಕ ಶಾಲಾ ಕಟ್ಟಡ ವಿಭಾಗದ ಉದ್ಘಾಟನೆ, ಶಾಲಾ ವಾರ್ಷಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಭಾಗದಲ್ಲಿ ಹಲವಾರು ಜನಪ್ರೀಯ ಕಾರ್ಯಗಳನ್ನು ಮಾಡಿದ ದಿ.ಸಂಜೀವ ರಾಯರ ಕಾಲಾನಂತರ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆದು ಸಮಾಜಕ್ಕೆ ಏನನ್ನಾದರೂ ಸೇವೆ ನೀಡಬೇಕೇನ್ನುವ ನೆಲೆಯಲ್ಲಿ ಎಲ್ಲರ ಸಹಾಯ ಸಹಕಾರದಿಂದ ಈ ಮಟ್ಟಕ್ಕೆ ಈ ಸಂಸ್ಥೆ ಬೇಳೆಯಲು ಸಹಕಾರಿಯಾಯಿತು ಎಂದರು.
     ಶಿರಾಲಿ ಚಿತ್ರಾಪುರಮಠದ ಪರಮಪೂಜ್ಯ ಶ್ರೀಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ರಜತಮಹೋತ್ಸವದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಶೃದ್ದೆ ಜ್ಞಾನ ಅತೀಮುಖ್ಯ. ಶಿಕ್ಷಕರು ಮಕ್ಕಳ ಮನಸ್ಸಿಗೆ ಈ ವಿಷಯಗಳನ್ನು ತುಂಬಿಸಿ ಮಕ್ಕಳು ಬೆಳೆಯುವಂತೆ ಮಾಡಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ಸುಶಿಕ್ಷಿತ ಪ್ರಜೆಯಾಗಿ ರೂಪಿಸಬೇಕು ಎಂದರಲ್ಲದೇ ಕೇವಲ ಕನ್ನಡ ಇಂಗ್ಲೀಷ್ ಮಾತ್ರವಲ್ಲದೇ ಎಷ್ಟು ಭಾಷೆಗಳನ್ನಾದರೂ ಕಲಿಯಬಹುದು ಎಂದರು.
   2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಡ ಶ್ರೇಣಿಯಲ್ಲಿ ಉತ್ತಿರ್ಣರಾದ ಪರಿಸರದ ಎಲ್ಲಾ ಶಾಲಾಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಆರ್.ಕೆ.ಸಂಜೀವ ರಾವ್ ಸ್ಮಾರಕ ದತ್ತಿನಿಧಿಯ ಅಧ್ಯಕ್ಷ ಕೆ. ಸತೀಶ್ಚಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಹಾಗೂ ಚಿತ್ರನಟ ಅನಂತ್ ನಾಗ್, ಸಿಂಡಿಕೇಟ್ ಬಾಂಕಿನ ಮಾಜಿ ಅಧ್ಯಕ್ಷ ನವೀನಚಂದ್ರ ತಿಂಗಳಾಯ, ಎಂಜಿ‌ಎಂ ಕಾಲೇಜಿನ ಪ್ರೊಪೆಸರ್ ಅಶೋಕ್ ಕುಂದಾಪುರ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಮತ್ತು ಸಂಜೀತ್ ರಾವ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಬಿ.ವಿಶ್ವೇಶ್ವರ ಅಡಿಗ ಶಾಲಾ ವರದಿವಾಚಿಸಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಜ್ಯೋತಿ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ನಾತರ ಮಕ್ಕಳಿಂದ ವಿವಿಧ ಸಾಂಸೃತಿಕ ಕಾರ್ಯಕ್ರಮಗಳು ಜರುಗಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com