ನೆಲ್ಸನ್‌ ಮಂಡೇಲ ಇನ್ನಿಲ್ಲ

 ದಕ್ಷಿಣ ಆಫ್ರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ 3 ದಶಕಗಳ ಜೈಲು ವಾಸ ಅನುಭವಿಸಿದ್ದ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ನೆಲ್ಸನ್‌ ಮಂಡೇಲ ಅವರು ಗುರುವಾರ 95ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
      ಮಂಡೇಲ ಅವರು 3 ಪುತ್ರಿಯರು, 18 ಮೊಮ್ಮಕ್ಕಳು, 9 ಮರಿ ಮಕ್ಕಳು, 3 ಮಲ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಾಶೇಲ್‌ ಜತೆಗಿನ ವಿವಾಹದಲ್ಲಿ ಮಂಡೇಲ ಅವರಿಗೆ ನಾಲ್ವರು ಮಲ ಮಕ್ಕಳು ಇದ್ದಾರೆ. 
      ನೆಲ್ಸನ್‌ ಮಂಡೇಲ ನಿಜವಾದ ಅರ್ಥದಲ್ಲಿ ಓರ್ವ ಪರಿಶುದ್ಧ ಹಾಗೂ ಪರಿಪೂರ್ಣ ಗಾಂಧಿಯಾಗಿದ್ದರು ಎಂದು ಭಾರತ ಅಗಲಿದ ಮಂಡೇಲಾಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.
       ದಕ್ಷಿಣ ಆಫ್ರಿಕದ ಮೊದಲ ಕರಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಹಾಗೂ 20ನೇ ಶತಮಾನದ ವಿಶ್ವದ ಬಹುದೊಡ್ಡ ರಾಜಕೀಯ ನಾಯಕನೆಂದು ಪರಿಗಣಿತರಾದ ಮಂಡೇಲಾ ಅವರು ಜೋಹಾನ್ಸ್‌ಬರ್ಗ್‌ನಲ್ಲಿನ ತಮ್ಮ ಮನೆಯಲ್ಲಿ ಗುರುವಾರ ನಿಧನಹೊಂದಿದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ನಿಧನದ ವೇಳೆ ಅವರ ಕುಟುಂಬ ಸದಸ್ಯರು ಅವರ ಸನಿಹದಲ್ಲೇ ಇದ್ದರು. 
     ಮಂಡೇಲಾ ಅವರ ನಿಧನದ ಸುದ್ದಿಯನ್ನು ದಕ್ಷಿಣ ಆಫ್ರಿಕದ ಅಧ್ಯಕ್ಷ ಜೇಕಬ್‌ ಝುಮಾ ಅವರು ಶೋಕತಪ್ತರಾಗಿ ರಾಷ್ಟ್ರೀಯ ಟಿವಿಯಲ್ಲಿ ವಿಶ್ವಕ್ಕೆ ಬಿತ್ತರಿಸಿದರು. 
     ನಮ್ಮ ಪ್ರಜಾಸತ್ತಾತ್ಮಕ ದೇಶದ ಸಂಸ್ಥಾಪಕ ಅಧ್ಯಕ್ಷರಾಗಿರುವ ಹಾಗೂ ನಮ್ಮೆಲ್ಲರ ಅತ್ಯಂತ ಪ್ರೀತಿಪಾತ್ರರಾಗಿರುವ ನೆಲ್ಸನ್‌ ರೊಹ್ಲಿಲಾ ಮಂಡೇಲಾ ಅವರು ನಮ್ಮನ್ನು ಅಗಲಿದ್ದಾರೆ ಎಂದು ಹೇಳು ಅತೀವ ದುಃಖವಾಗುತ್ತಿದೆ' ಎಂದವರು ಟಿವಿಯಲ್ಲಿ ದೇಶವನ್ನು ಉದ್ದೇಶಿಸಿ ಹೇಳಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com