ಕಮಾಂಡೆಂಟ್‌ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ದ.ಕ. ಜಿಲ್ಲೆಯ ಗೃಹರಕ್ಷಕ ದಳ ಘಟಕದ ಗೌರವ ಸಮಾದೇಷ್ಟ (ಕಮಾಂಡೆಂಟ್‌) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗದ 50 ವರ್ಷ ಮೀರದ ಪದವೀಧರರು ಹಾಗೂ ಮಂಗಳೂರು ನಗರದ 20 ಕಿ. ಮೀ. ವ್ಯಾಪ್ತಿಯೊಳಗೆ ವಾಸಿಸುವವರು ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಯಾವುದೇ ನ್ಯಾಯಾಲಯಗಳಿಂದ ಶಿಕ್ಷಿತರಾಗಿರಬಾರದು. ಸಮಾದೇಷ್ಟರ ಅವಧಿ 5 ವರ್ಷವಾಗಿದ್ದು, ಈ ಹುದ್ದೆ ಯಾವುದೇ ವೇತನಕ್ಕೊಳಪಟ್ಟಿಲ್ಲ. ಆಸಕ್ತರು ತಮ್ಮ ಸಂಪೂರ್ಣ ವಿವರ ಹಾಗೂ ಇಬ್ಬರು ಗೌರವಾನ್ವಿತ ವ್ಯಕ್ತಿಗಳ ಉಲ್ಲೇಖದೊಂದಿಗೆ ಡಿ. 31ರೊಳಗೆ ದ.ಕ. ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com