ಡಿ.28ಕ್ಕೆ ಬ್ರಹ್ಮಾವರ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಬ್ರಹ್ಮಾವರ ಹೋಬಳಿ ಮಟ್ಟದ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ ಡಿ.28ರಂದು ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. 

ಸಮ್ಮೇಳನಾಧ್ಯಕ್ಷೆಯಾಗಿ ಶಿಕ್ಷಕಿ, ಕವಿ, ಕಥೆಗಾರ್ತಿ, ಸಾಮಾಜಿಕ ಹಾಗೂ ರಾಜಕೀಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ವಸಂತಿ ಶೆಟ್ಟಿ ಬ್ರಹ್ಮಾವರ ಆಯ್ಕೆಯಾಗಿದ್ದಾರೆ. 

ಹೋಬಳಿ ಸಮ್ಮೇಳನವನ್ನು ಬ್ರಹ್ಮಾವರದ ಹಿರಿಯ ನಿವತ್ತ ಶಿಕ್ಷಕ, ಯಕ್ಷಗಾನ ವಿದ್ವಾಂಸ ಎಚ್. ಸುಬ್ಬಣ್ಣ ಭಟ್ ಉದ್ಧಾಟಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಜಾನಕಿ ಬ್ರಹ್ಮಾವರ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ. ಉಪೇಂದ್ರ ಸೋಮಯಾಜಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಿ. ಪೂಜಾರಿ ರಾಷ್ಟ್ರ ಧ್ವಜವನ್ನು ಹಾಗೂ ಬ್ರಹ್ಮಾವರ ಹೋಬಳಿ ಘಟಕದ ಅಧ್ಯ್ಯಕ್ಷೆ ಗೀತಾ ಸಾಮಂತ ಪರಿಷತ್ತಿನ ಧ್ವಜವನ್ನು ಆರೋಹಣ ಮಾಡಲಿದ್ದಾರೆ. 

ಸಮ್ಮೇಳನದಲ್ಲಿ ಸುಬ್ರಹ್ಮಣ್ಯ ಬಾಸ್ರಿಯವರು ವಸಂತಿ ಶೆಟ್ಟಿ ಬದುಕು ಬರಹ, ಜಯಂತ ಕುಮಾರ್ ತೋನ್ಸೆಯವರು ಯಕ್ಷಗಾನ ಕ್ಷೇತ್ರಕ್ಕೆ ಬ್ರಹ್ಮಾವರದ ಕೊಡುಗೆ, ಕೆ. ಶ್ರೀಮತಿ ಅವರು ಮಕ್ಕಳ ಸಾಹಿತ್ಯಕ್ಕೆ ಉಡುಪಿ ಜಿಲ್ಲೆಯ ಕೊಡುಗೆ ಮತ್ತು ಬಿ.ಎಸ್. ರಾಮ ಶೆಟ್ಟಿಯವರು ಶಿಕ್ಷಣದಲ್ಲಿ ರಂಗಭೂಮಿ ವಿಚಾರದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕವಿ ಸಮಯ, ಕಥಾ ಸಮಯ, ಮತ್ತು ಅಭಿಲಾಷಾ ಎಸ್. ಅವರ ನಿರ್ದೇಶನದಲ್ಲಿ ಕಾವ್ಯ ಕಥಾರಂಗವನ್ನೂ ಸಂಯೋಜಿಸಲಾಗಿದೆ. 

ಸಂಜೆ ಸಮಾರೋಪ ಸಮಾರಂಭದಲ್ಲಿ ಗೀತಾ ಸಾಮಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ತಾರಾದೇವಿ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿ ಶಾಸಕ ಪ್ರಮೋದ ಮಧ್ವರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಿಕ್ಷಣಾಕಾರಿ ನಾಗೇಶ ಶಾನುಭೋಗ್ ಭಾಗವಹಿಸಲಿದ್ದಾರೆ.

ಪುಸ್ತಕ ಸಂಸ್ಕತಿಯ ಶಾಂಭವಿ, ಉಪ್ಪಿನಕೋಟೆ ಹಾಗೂ ಯಕ್ಷಗಾನ ಕ್ಷೇತ್ರದ ವರ್ಣಾಲಂಕಾರ ಕಲಾವಿದ ಬಾಲಕಷ್ಣ ನಾಯಕ್ ಹಂದಾಡಿ ಅವರನ್ನು ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಹೋಬಳಿ ಅಧ್ಯಕ್ಷೆ ಗೀತಾ ಸಾಮಂತ್, ತಾಲೂಕು ಅಧ್ಯಕ್ಷ ಉಪೇಂದ್ರ ಸೋಮಯಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com