ಶಂಕರನಾರಾಯಣ ಕೆಳಾಮಠಕ್ಕೆ ಶೃಂಗೇರಿ ಶ್ರೀಗಳು ಭೇಟಿ

ಸಿದ್ದಾಪುರ: ಪಂಚಗ್ರಾಮ ಬ್ರಾಹ್ಮಣರ (ತೀರ್ಥಮುಕ್ತಾಪುರೀ ಸಂಸ್ಥಾನಂ.) ಮೂಲ ಮಠ ಶಂಕರನಾರಾಯಣದ ಕೆಳಾಮಠದ ಜೀಣೋದ್ಧಾರದ ಹಿನ್ನಲೆಯಲ್ಲಿ ಜಗದ್ಗುರು ಶೃಂಗೇರಿ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರು ಅವರು ಭೇಟಿ ನೀಡಿ ಆರ್ಶಿವದಿಸಿದರು.

ಜಗದ್ಗುರು ಶೃಂಗೇರಿ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರು ಕೆಳಾಮಠದ ದೇವರಾದ ಶ್ರೀಗೋಪಾಲಕೃಷ್ಣ ದೇವರಿಗೆ ಪೂಜಾಗಳನ್ನು ನೇರವೇರಿಸಿದರು. ನಂತರ ಪಂಚಗ್ರಾಮ ಬ್ರಾಹ್ಮಣರಿಗೆ ಮಂತ್ರಾಕ್ಷತಿ ನೀಡಿ, ಈ ಮಠವು ಕೂಡಲೆ ಜೀಣೋದ್ಧಾರಗೊಂಡು ಮೊದಲಿನಂತೆ ಪೀಠಾಧೀಶರು ಹುಟ್ಟಿಬರಲಿ ಎಂದು ಹೇಳಿದರು.

ಮೂಲ ಮಠವಾದ ಶಂಕರನಾರಾಯಣದ ಕೆಳಾಮಠವು ಅಜೀರ್ಣಗೊಂಡಿರುದರಿಂದ ಯೋಗನರಸಿಂಹ ಟ್ಟಸ್ಟ್‌ ಜೀಣೋದ್ಧಾರಕ್ಕೆ ಈಗ ಮುಂದಾಗಿದೆ. ಈ ಹಿನ್ನಲೆಯಲ್ಲಿ ಮಠಕ್ಕೆ ಜಗದ್ಗುರು ಶೃಂಗೇರಿ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರು ಕರೆಸುವ ಮೂಲಕ ಆರ್ಶಿವಾದ ಪಡೆದರು.

ಜೀಣೋದ್ಧಾರ ಕಾರ್ಯ: ಪಂಚಗ್ರಾಮ ಬ್ರಾಹ್ಮಣರ (ತೀರ್ಥಮುಕ್ತಾಪುರೀ ಸಂಸ್ಥಾನಂ ) ಮೂಲ ಮಠವಾದ ಶಂಕರನಾರಾಯಣದ ಕೆಳಾಮಠವು ಸುಮಾರು 800ವರ್ಷಗಳ ಇತಿಹಾಸವನ್ನು ಹೊಂದಿದೆ. ಶೃಂಗೇರಿ ಮಠದ 13ನೇ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಶ್ರೀಗಳು ಕ್ರಿ.ಶ. 1388ರಲ್ಲಿ ಕೆಳಾಮಠಕ್ಕೆ ಪ್ರಥಮ ಗುರುಗಳಾಗಿ ಶ್ರೀ ಶ್ರೀ ನರಸಿಂಹ ಭಾರತೀ ಶ್ರೀಯವರಿಗೆ ಸನ್ಯಾಸಿ ದೀಕ್ಷೆ ನೀಡಿದರು. ನಂತರ ಈ ಮಠವು ಉಚ್ಚಾಯ ಸ್ಥಿತಿಗೆ ತಲುಪಿತ್ತು. ನಂತರದ ಪೀಠವನ್ನು ಆಲಂಕರಿಸಿದ ಶ್ರೀಗಳು ತೀರ್ಥಹಳ್ಳಿಯ ತೀರ್ಥಮೂತ್ತೂರಿನಲ್ಲಿ ಶಾಖಾ ಮಠವನ್ನು ಸ್ಥಾಪಿಸಿ, ಅಲ್ಲಿಂದಲೇ ಮೂಲ ಮಠದ ಆಡಳಿತವನ್ನು ನೋಡಿಕೊಳ್ಳುತ್ತಿದರು. ಈ ಮಠದ ಕೊನೆಯ ಸ್ವಾಮೀಜಿಯವರಾದ ಶ್ರೀ ಶ್ರೀ ಜ್ಞಾನೇಂದ್ರ ಭಾರತೀ ಶ್ರೀಗಳು 1985ರಲ್ಲಿ ವಿಧಿವಶರಾದ ನಂತರ ಮಠವು ಅಜೀರ್ಣ ವ್ಯವಸ್ಥೆಗೆ ತಲುಪಿತ್ತು. 1989ರಲ್ಲಿ ಪಂಚಗ್ರಾಮ ಬ್ರಾಹ್ಮಣರು ಸೇರಿಕೊಂಡು ತೀರ್ಥಮೂತ್ತೂರಿನಲ್ಲಿ ಯೋಗನರಸಿಂಹ ಟ್ಟಸ್ಟ್‌ ಸ್ಥಾಪನೆ ಮಾಡಿಕೊಂಡು ಈಗ ಶಂಕರನಾರಾಯಣದ ಕೆಳಾಮಠ ಹಾಗೂ ಶಾಖಾ ಮಠವಾದ ತೀರ್ಥಮೂತ್ತೂರಿ ಮಠದ ಆಡಳಿತ ನೋಡಿಕೊಳ್ಳುತ್ತಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com